ವಾಣಿಜ್ಯ

ಆಗಸ್ಟ್‌ನಲ್ಲಿ 20 ಬಿಲಿಯನ್ ದಾಟಿದ ಯುಪಿಐ ವಹಿವಾಟು

ಮೌಲ್ಯದ ದೃಷ್ಟಿಯಿಂದ ಇದುವರೆಗಿನ ಅತ್ಯಧಿಕ UPI ವಹಿವಾಟು ಮೇ ತಿಂಗಳಲ್ಲಿ(25.14 ಲಕ್ಷ ಕೋಟಿ ರೂ. ವಹಿವಾಟು) ದಾಖಲಾಗಿದೆ.

ಆಗಸ್ಟ್‌ನಲ್ಲಿ 20 ಬಿಲಿಯನ್ ದಾಟಿದ ಯುಪಿಐ ವಹಿವಾಟು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಭಾರತದಲ್ಲಿ ಜನಪ್ರಿಯ ಏಕೀಕೃತ ಪಾವತಿ ಇಂಟರ್ಫೇಸ್(UPI) ಪಾವತಿ ದಿನೇ ದಿನೇ ಹೆಚ್ಚುತ್ತಿದ್ದು, ಆಗಸ್ಟ್‌ನಲ್ಲಿ ಯುಪಿಐ ವಹಿವಾಟು 20 ಬಿಲಿಯನ್ ದಾಟಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ(NPCI) ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ಮೌಲ್ಯದ ದೃಷ್ಟಿಯಿಂದ, ಜುಲೈನಲ್ಲಿ ದಾಖಲಾದ 25.08 ಲಕ್ಷ ಕೋಟಿ ರೂ.ಗಳಿಗಿಂತ ಇದು ಕಡಿಮೆ ಇದ್ದು, ಈ ಆಗಸ್ಟ್ ತಿಂಗಳಲ್ಲಿ 24.85 ಲಕ್ಷ ಕೋಟಿ ರೂ.ವಹಿವಾಟು ನಡೆದಿದೆ. ಮೌಲ್ಯದ ದೃಷ್ಟಿಯಿಂದ ಇದುವರೆಗಿನ ಅತ್ಯಧಿಕ UPI ವಹಿವಾಟು ಮೇ ತಿಂಗಳಲ್ಲಿ(25.14 ಲಕ್ಷ ಕೋಟಿ ರೂ. ವಹಿವಾಟು) ದಾಖಲಾಗಿದೆ.

NPCI ಪ್ರಕಾರ, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದಾಖಲಾದ 20.60 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್ ನಲ್ಲಿ UPI ವಹಿವಾಟಿನ ಮೊತ್ತವು ಶೇ. 21 ರಷ್ಟು ಹೆಚ್ಚಳವಾಗಿದೆ.

ಆಗಸ್ಟ್‌ನಲ್ಲಿ ಸರಾಸರಿ ದೈನಂದಿನ ವಹಿವಾಟು ಮೊತ್ತ 80,177 ಕೋಟಿಗಳಷ್ಟಿದ್ದರೆ, ಈ ತಿಂಗಳಲ್ಲಿ ಸರಾಸರಿ ದೈನಂದಿನ ವಹಿವಾಟು ಸಂಖ್ಯೆ 645 ಮಿಲಿಯನ್ ಆಗಿತ್ತು ಎಂದು ಎನ್‌ಪಿಸಿಐ ತಿಳಿಸಿದೆ.

ಇದರೊಂದಿಗೆ ಯುಪಿಐ ವಹಿವಾಟು ಮೌಲ್ಯ ಮತ್ತು ಸಂಖ್ಯೆ ಎರಡೂ ಹೆಚ್ಚಿರುವುದು ಯುಪಿಐ ಬಳಕೆ ಮತ್ತು ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವುದರ ಸಂಕೇತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.