ವಾಣಿಜ್ಯ

GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜೂನ್‌ನಲ್ಲಿ 1.84 ಲಕ್ಷ ಕೋಟಿ ರೂ ಸಂಗ್ರಹ

ಕಳೆದ ವರ್ಷ ಇದೇ ತಿಂಗಳಲ್ಲಿ ಒಟ್ಟು 1,73,813 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ವರ್ಷ ಜೂನ್ ನಲ್ಲಿ ಜಿಎಸ್‌ಟಿ ಸಂಗ್ರಹವು 1.84 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.

GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜೂನ್‌ನಲ್ಲಿ 1.84 ಲಕ್ಷ ಕೋಟಿ ರೂ ಸಂಗ್ರಹ
ಸಾಂದರ್ಭಿಕ ಚಿತ್ರ — TNIE
Published On :

ನವದೆಹಲಿ: ಕಳೆದ ಜೂನ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 6.5 ರಷ್ಟು ಏರಿಕೆಯಾಗಿದ್ದು, ಒಟ್ಟು 1.84 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ತಿಳಿಸಿವೆ.

ಕಳೆದ ವರ್ಷ ಇದೇ ತಿಂಗಳಲ್ಲಿ ಒಟ್ಟು 1,73,813 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ವರ್ಷ ಜೂನ್ ನಲ್ಲಿ ಜಿಎಸ್‌ಟಿ ಸಂಗ್ರಹವು 1.84 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 6.2ರಷ್ಟು ಹೆಚ್ಚು ಜಿಎಸ್​​ಟಿ ಆದಾಯ ಸರ್ಕಾರಕ್ಕೆ ಸಿಕ್ಕಿದೆ.

ಹಿಂದಿನ ಎರಡು ತಿಂಗಳಿಗೆ ಹೋಲಿಸಿದರೆ ಜಿಎಸ್​​ಟಿ ಸಂಗ್ರಹ ಇಳಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ದಾಖಲೆಯ 2.37 ಲಕ್ಷ ಕೋಟಿ ರೂ, ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂ ಜಿಎಸ್​​ಟಿ ಸಿಕ್ಕಿತ್ತು. ಈ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ ಮಾಸಿಕ ಜಿಎಸ್​​ಟಿ ಸಂಗ್ರಹ 2 ಲಕ್ಷ ಕೋಟಿ ರೂಗಿಂತ ಕೆಳಗೆ ಹೋಗಿದೆ.

ಜೂನ್‌ನಲ್ಲಿ, ದೇಶೀಯ ವಹಿವಾಟುಗಳಿಂದ ಒಟ್ಟು ಆದಾಯವು ಶೇ 4.6 ರಷ್ಟು ಹೆಚ್ಚಾಗಿ ಸುಮಾರು ರೂ 1.38 ಲಕ್ಷ ಕೋಟಿಗೆ ತಲುಪಿದ್ದರೆ, ಆಮದುಗಳಿಂದ ಜಿಎಸ್‌ಟಿ ಆದಾಯವು ಶೇ 11.4 ರಷ್ಟು ಹೆಚ್ಚಾಗಿ 45,690 ಕೋಟಿ ರೂ.ಗಳಿಗೆ ತಲುಪಿದೆ.

ಜೂನ್‌ನಲ್ಲಿ ಒಟ್ಟು ಕೇಂದ್ರ ಜಿಎಸ್‌ಟಿ ಆದಾಯವು 34,558 ಕೋಟಿ ರೂ. ಆಗಿದ್ದರೆ, ರಾಜ್ಯ ಜಿಎಸ್‌ಟಿ ಆದಾಯ 43,268 ಕೋಟಿ ರೂ. ಮತ್ತು ಸಮಗ್ರ ಜಿಎಸ್‌ಟಿ ಸುಮಾರು 93,280 ಲಕ್ಷ ಕೋಟಿ ರೂ. ಗೆ ತಲುಪಿದೆ. ಸೆಸ್‌ನಿಂದ 13,491 ಕೋಟಿ ರೂ. ಆದಾಯ ಬಂದಿದೆ.

ಈ ಮಧ್ಯೆ, ಈ ತಿಂಗಳಲ್ಲಿ ಒಟ್ಟು ಮರುಪಾವತಿ ಶೇ. 28.4 ರಷ್ಟು ಹೆಚ್ಚಾಗಿ 25,491 ಕೋಟಿ ರೂ.ಗಳಿಗೆ ತಲುಪಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.