ವಾಣಿಜ್ಯ

Indian Stock Market: ಎರಡು ದಿನಗಳ ಏರಿಕೆ ಬೆನ್ನಲ್ಲೇ ಕುಸಿತ, Sensex 400 ಅಂಕ ಇಳಿಕೆ!

ವಾರದ ಮೂರನೇ ದಿನವಾದ ಇಂದು 81,928.12 ಅಂಕಗಳೊಂದಿಗೆ ವಹಿವಾಟು ಆರಂಭಿಸಿದ್ದ BSE Sensex ದಿನದ ವಹಿವಾಟು ಅಂತ್ಯಕ್ಕೆ 398.13 ಅಂಕಗಳ ಇಳಿಕೆಯೊಂದಿಗೆ 82,134.95 ಅಂಕಗಳಿಗೆ ಕುಸಿತ ಕಂಡಿತು.

Indian Stock Market: ಎರಡು ದಿನಗಳ ಏರಿಕೆ ಬೆನ್ನಲ್ಲೇ ಕುಸಿತ, Sensex 400 ಅಂಕ ಇಳಿಕೆ!
ಷೇರುಮಾರುಕಟ್ಟೆ
Published On :

ಮುಂಬೈ: ವಾರದ ಮೊದಲೆರಡು ದಿನದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದ್ದ ಭಾರತೀಯ ಷೇರು ಮಾರುಕಟ್ಟೆ ಬುಧವಾರ ಕುಸಿತ ದಾಖಲಿಸಿದ್ದು, ಸೆನ್ಸೆಕ್ಸ್ ಬರೊಬ್ಬರಿ 400 ಅಂಕಗಳ ಇಳಿಕೆ ಕಂಡಿದೆ.

ವಾರದ ಮೂರನೇ ದಿನವಾದ ಇಂದು 81,928.12 ಅಂಕಗಳೊಂದಿಗೆ ವಹಿವಾಟು ಆರಂಭಿಸಿದ್ದ BSE Sensex ದಿನದ ವಹಿವಾಟು ಅಂತ್ಯಕ್ಕೆ 398.13 ಅಂಕಗಳ ಇಳಿಕೆಯೊಂದಿಗೆ 82,134.95 ಅಂಕಗಳಿಗೆ ಕುಸಿತ ಕಂಡಿತು. ಅಂತೆಯೇ NSE Nifty ಕೂಡ 25,034.00 ಅಂಕಗಳೊಂದಿಗೆ ದಿನದ ವಹಿವಾಟು ಆರಂಭಿಸಿ 122.65 ಅಂಕಗಳ ಇಳಿಕೆಯೊಂದಿಗೆ 25,113.70 ಅಂಕಗಳಿಗೆ ಕುಸಿದಿದೆ.

ಇಂದು (ಬುಧವಾರ) ಸೆನ್ಸೆಕ್ಸ್ 398.13 ಅಂಕ ನಷ್ಟ ಅನುಭವಿಸಿದ್ದು, ದೇಶದ ಪ್ರಮುಖ ಸಂಸ್ಥೆಗಳ ಷೇರುಮೌಲ್ಯ ಕುಸಿತಕಂಡಿದೆ. ಪ್ರಮುಖವಾಗಿ ಟಾಟಾ ಮೋಟಾರ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಕುಸಿತ ಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ 30 ಸಂಸ್ಥೆಗಳ ಪೈಕಿ ಟಾಟಾ ಮೋಟಾರ್ಸ್ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ್ದು, ಆ ಸಂಸ್ಥೆಯ ಷೇರುಮೌಲ್ಯ 6 ಪ್ರತಿಶತದಷ್ಟು ಕುಸಿದಿದೆ.

ಉಳಿದಂತೆ NTPC, ಅದಾನಿ ಪೋರ್ಟ್ಸ್, ಲಾರ್ಸೆನ್ & ಟೂಬ್ರೊ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, JSW ಸ್ಟೀಲ್, ಮಹೀಂದ್ರ ಮತ್ತು ಮಹೀಂದ್ರಾ, ಇಂಡಸ್ಇಂಡ್ ಬ್ಯಾಂಕ್ ಮತ್ತು ಟೈಟಾನ್ ಸಂಸ್ಥೆಗಳ ಷೇರುಮೌಲ್ಯ ಕುಸಿದಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಬಜಾಜ್ ಫಿನ್‌ಸರ್ವ್ ಸಂಸ್ಥೆಗಳ ಷೇರುಗಳು ಲಾಭ ಗಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.