Indian Stock Market: ಸತತ 5 ದಿನಗಳ ಕುಸಿತ ಕೊನೆಗೂ ಅಂತ್ಯ; ಸೆನ್ಸೆಕ್ಸ್ 602.75 ಅಂಕ ಏರಿಕೆ
ಕಳೆದ ವಾರವಿಡೀ ಕುಸಿತದಲ್ಲೇ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ 602.75 ಅಂಕಗಳ ಏರಿಕೆಯೊಂದಿಗೆ 80,005.04 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಮುಂಬೈ: ಸತತ ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ಸತತ 5 ದಿನಗಳ ಕುಸಿತ ಬಳಿಕ ಇಂದು ಅಂದರೆ ವಾರದ ಮೊದಲ ದಿನವೇ ಭರ್ಜರಿ ಚೇತರಿಕೆ ಕಂಡಿದೆ.
ಹೌದು.. ಕಳೆದ ವಾರವಿಡೀ ಕುಸಿತದಲ್ಲೇ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ 602.75 ಅಂಕಗಳ ಏರಿಕೆಯೊಂದಿಗೆ 80,005.04 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಅಂತೆಯೇ ನಿಫ್ಟಿ ಕೂಡ 158.35 ಅಂಕಗಳ ಏರಿಕೆಯೊಂದಿಗೆ 24,339.15 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದು ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಶೇ.0.76ರಷ್ಟು ಏರಿಕೆಯಾಗಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.0.65ರಷ್ಟು ಏರಿಕೆ ಕಂಡಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಪೈಕಿ ICICI ಬ್ಯಾಂಕ್, ಅದಾನಿ ಪೋರ್ಟ್ಸ್, JSW ಸ್ಟೀಲ್, ಟಾಟಾ ಸ್ಟೀಲ್, M&M, ಸನ್ ಫಾರ್ಮಾ ಸಂಸ್ಥೆಗಳು ಲಾಭಾಂಶ ಕಂಡಿದ್ದು, ಅಂತೆಯೇ ಆಕ್ಸಿಸ್ ಬ್ಯಾಂಕ್, ಕೊಟಕ್ ಬ್ಯಾಂಕ್, ಟೆಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಮತ್ತು ಏರ್‌ಟೆಲ್ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



