ವಾಣಿಜ್ಯ

ಷೇರು ಮಾರುಕಟ್ಟೆಯಲ್ಲಿ ಕಳೆದ 4 ತಿಂಗಳಲ್ಲೇ ಅತಿ ದೊಡ್ಡ ಕುಸಿತ: ಹೂಡಿಕೆದಾರರಿಗೆ 9.78 ಲಕ್ಷ ಕೋಟಿ ರೂ. ನಷ್ಟ!

ಕಳೆದ 4 ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಇಂತಹ ಕುಸಿತ ಸಂಭವಿಸಿತ್ತು. 2024ರ ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಇದುವರೆಗಿನ ಅತಿದೊಡ್ಡ ಕುಸಿತ ಕಂಡಿತ್ತು.

ಷೇರು ಮಾರುಕಟ್ಟೆಯಲ್ಲಿ ಕಳೆದ 4 ತಿಂಗಳಲ್ಲೇ ಅತಿ ದೊಡ್ಡ ಕುಸಿತ: ಹೂಡಿಕೆದಾರರಿಗೆ 9.78 ಲಕ್ಷ ಕೋಟಿ ರೂ. ನಷ್ಟ!
ಸಂಗ್ರಹ ಚಿತ್ರ
Published On :

ಮುಂಬೈ: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ವಹಿವಾಟಿನ ವಾರದ ನಾಲ್ಕನೇ ದಿನದಂದು ಭಾರೀ ಕುಸಿತದೊಂದಿಗೆ ಷೇರು ಮಾರುಕಟ್ಟೆ ಮುಕ್ತಾಯಗೊಂಡಿದೆ. ಬಿಎಸ್‌ಇಯಲ್ಲಿ ಸೆನ್ಸೆಕ್ಸ್ 1,769 ಅಂಕಗಳ ಕುಸಿತದೊಂದಿಗೆ 82,497.10ಕ್ಕೆ ಕೊನೆಗೊಂಡಿದ್ದರೆ ಅದೇ ಸಮಯದಲ್ಲಿ, NSEನಲ್ಲಿ ನಿಫ್ಟಿ ಶೇಕಡ 2.12 ರಷ್ಟು ಕುಸಿತದೊಂದಿಗೆ 25,250.10ಕ್ಕೆ ಮುಕ್ತಾಯಗೊಂಡಿದೆ.

ಸೆನ್ಸೆಕ್ಸ್‌ನಲ್ಲಿ ಇಂದಿನ ವಹಿವಾಟಿನ ಸಂದರ್ಭದಲ್ಲಿ, ಜುಬಿಲಂಟ್ ಇಂಗ್ರಾವಿಯಾ, ಆಂಬರ್ ಎಂಟರ್‌ಪ್ರೈಸಸ್, ಪೆಟ್ರೋನೆಟ್ ಎಲ್‌ಎನ್‌ಜಿ, ಏಂಜೆಲ್ ಒನ್ ಷೇರುಗಳು ಹೆಚ್ಚು ಲಾಭದಾಯಕ ಪಟ್ಟಿಯಲ್ಲಿ ಸೇರ್ಪಡೆಗೊಂಡರೆ, ಏಷ್ಯನ್ ಪೇಂಟ್ಸ್, ಎಲ್ & ಟಿ, ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಆಕ್ಸಿಸ್ ಬ್ಯಾಂಕ್ ಷೇರುಗಳು ಕುಸಿತದ ಪಟ್ಟಿಯಲ್ಲಿ ಸೇರಿವೆ.

ಬೆಂಚ್ಮಾರ್ಕ್ ಸೂಚ್ಯಂಕಗಳು ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಕೆಂಪು ಬಣ್ಣಕ್ಕೆ ತಿರುಗಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಬಗ್ಗೆ ಹೂಡಿಕೆದಾರರು ಕಳವಳ ವ್ಯಕ್ತಪಡಿಸಿದ್ದರಿಂದ ಹೆಚ್ಚಿನ ವಲಯಗಳಾದ್ಯಂತ ನಷ್ಟಕ್ಕೆ ಕಾರಣವಾಯಿತು. ಎಲ್ಲಾ 13 ಪ್ರಮುಖ ವಲಯದ ಸೂಚ್ಯಂಕಗಳು ಕುಸಿದಿದ್ದು ರಿಯಲ್ ಎಸ್ಟೇಟ್ ಮತ್ತು ಆಟೋ ಷೇರುಗಳು ಮತ್ತಷ್ಟು ಕುಸಿತ ಕಂಡಿದೆ.

ಇಂದಿನ ಮಾರುಕಟ್ಟೆ ಕುಸಿತದಿಂದ ಹೂಡಿಕೆದಾರರಿಗೆ 9.78 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಕಳೆದ 4 ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಇಂತಹ ಕುಸಿತ ಸಂಭವಿಸಿತ್ತು. 2024ರ ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಇದುವರೆಗಿನ ಅತಿದೊಡ್ಡ ಕುಸಿತ ಕಂಡಿತ್ತು.

ವಾರದ ವಹಿವಾಟಿನ ನಾಲ್ಕನೇ ದಿನದಂದು ಷೇರುಪೇಟೆ ಭಾರಿ ಕುಸಿತದೊಂದಿಗೆ ಆರಂಭವಾಯಿತು. ಬಿಎಸ್‌ಇಯಲ್ಲಿ ಸೆನ್ಸೆಕ್ಸ್ 831 ಪಾಯಿಂಟ್‌ಗಳ ಕುಸಿತದೊಂದಿಗೆ 83,434.79ರಿಂದ ಪ್ರಾರಂಭವಾಯಿತು. ಅದೇ ಸಮಯದಲ್ಲಿ, ನಿಫ್ಟಿ NSE ನಲ್ಲಿ 1.03 ಶೇಕಡಾ ಕುಸಿತದೊಂದಿಗೆ 25,529.95ರಿಂದ ಪ್ರಾರಂಭವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.