SMS ಮೂಲಕ ಬರುವ ವೆಬ್ ಲಿಂಕ್‌ಗಳ ವೈಟ್‌ಲಿಸ್ಟ್ ಕಡ್ಡಾಯಗೊಳಿಸಿದ TRAI; ಇಂದಿನಿಂದ ಜಾರಿ
ಈ ನಿಯಮ ಅಕ್ಟೋಬರ್ 1, 2024 ರಿಂದ ಜಾರಿಗೆ ಬರುತ್ತಿದ್ದು, ಟೆಲಿಕಾಂ ಸೇವಾ ಪೂರೈಕೆದಾರರು ವೈಟ್‌ಲಿಸ್ಟ್ ಮಾಡಲಾದ ಲಿಂಕ್‌ಗಳನ್ನು ಮಾತ್ರ SMS ಮೂಲಕ ರವಾನಿಸುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ನವದೆಹಲಿ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇಂದಿನಿಂದ SMS ಮೂಲಕ ವೆಬ್ ಲಿಂಕ್‌ಗಳ ವೈಟ್‌ಲಿಸ್ಟ್ ಮಾಡುವುದನ್ನು ಕಡ್ಡಾಯಗೊಳಿಸಿದ್ದು, ಇನ್ನುಮುಂದೆ ಮೊಬೈಲ್ ಫೋನ್ ಬಳಕೆದಾರರು SMS ಮೂಲಕ ಅನುಮೋದಿತ ವೆಬ್ ಲಿಂಕ್‌ಗಳನ್ನು ಮಾತ್ರ ಸ್ವೀಕರಿಸುತ್ತಾರೆ.
ಈ ನಿಯಮ ಅಕ್ಟೋಬರ್ 1, 2024 ರಿಂದ ಜಾರಿಗೆ ಬರುತ್ತಿದ್ದು, ಟೆಲಿಕಾಂ ಸೇವಾ ಪೂರೈಕೆದಾರರು ವೈಟ್‌ಲಿಸ್ಟ್ ಮಾಡಲಾದ ಲಿಂಕ್‌ಗಳನ್ನು ಮಾತ್ರ SMS ಮೂಲಕ ರವಾನಿಸುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಈ ಕ್ರಮವು ಬಳಕೆದಾರರು ದುರುದ್ದೇಶಪೂರಿತ ವೆಬ್‌ಸೈಟ್‌ಗಳಿಂದ ಮೋಸ ಹೋಗುವುದನ್ನು ತಪ್ಪಿಸುತ್ತದೆ.
ವೆಬ್‌ಸೈಟ್ ಲಿಂಕ್‌ಗಳು, OTT ಲಿಂಕ್‌ಗಳು, APK ಗಳನ್ನು ಹೊಂದಿದ್ದರೆ ವೈಟ್‌ಲಿಸ್ಟ್ ಮಾಡದ ಕಂಪನಿಗಳಿಂದ SMS ಸಂದೇಶಗಳನ್ನು ನಿರ್ಬಂಧಿಸುವಂತೆ ಟೆಲಿಕಾಂ ಪ್ರಾಧಿಕಾರ, ಟೆಲಿಕಾಂ ಕಂಪನಿಗಳನ್ನು ಸೂಚಿಸಿದೆ.
ನೀವು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ನಿಮ್ಮ ಫೋನ್‌ನಲ್ಲಿ ವೈರಸ್‌ಗಳು ಬರುವ ಸಾಧ್ಯತೆಯಿದೆ. ಈ ಹೊಸ ನಿಯಮವು ಅಂತಹ ಅಪಾಯವನ್ನು ಕಡಿಮೆ ಮಾಡುತ್ತದೆ.
ಟ್ರಾಯ್ ಸೆಪ್ಟೆಂಬರ್‌ನಿಂದ ಈ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಆದರೆ, ಕಂಪನಿಗಳು ಈ ಬದಲಾವಣೆಗೆ ಸಿದ್ಧರಾಗದ ಕಾರಣ, ದಿನಾಂಕವನ್ನು ಅಕ್ಟೋಬರ್ 1ರ ವರೆಗೆ ಮುಂದೂಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



