ಐಪಿಒಗೂ ಮುನ್ನ 400 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ಸ್ವಿಗ್ಗಿ ಮುಂದು!
ಐಪಿಒಗೂ ಮುನ್ನ 400 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ಸ್ವಿಗ್ಗಿ ಮುಂದಾಗಿದೆ.

ನವದೆಹಲಿ: ಐಪಿಒಗೂ ಮುನ್ನ 400 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ಸ್ವಿಗ್ಗಿ ಮುಂದಾಗಿದೆ.
ಸಂಸ್ಥೆಯ ಪುನಾರಚನೆಯ ಯೋಜನೆಯ ಭಾಗವಾಗಿ ಸಂಸ್ಥೆ 380 ಕೌಶಲ್ಯ ಸ್ವಿಗ್ಗಿ ನೌಕರರನ್ನು ತೆಗೆದುಹಾಕುತ್ತಿರುವುದಾಗಿ ಕಳೆದ ವರ್ಷ ಹೇಳಿತ್ತು. ಈಗ ಮತ್ತೆ 400 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಸ್ವಿಗ್ಗಿ ಹೇಳಿದೆ.
ವರದಿಗಳ ಪ್ರಕಾರ ಹಣಕಾಸು ವೆಚ್ಚವನ್ನು ಕಡಿಮೆ ಮಾಡಲು ಎರಡನೇ ಹಂತದಲ್ಲಿ ಉದ್ಯೋಗ ಕಡಿತಕ್ಕೆ ಸಂಸ್ಥೆ ಮುಂದಾಗಿದ್ದು, 6000 ನೌಕರರ ಪೈಕಿ ಶೇ.7ರಷ್ಟು ಮಂದಿ ನೌಕರರ ಮೇಲೆ ಈ ನಿರ್ಧಾರ ಪರಿಣಾಮ ಉಂಟುಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಟೆಕ್, ಗ್ರಾಹಕ ಸೇವೆ ಮತ್ತು ಕಾರ್ಪೊರೇಟ್ ಪಾತ್ರಗಳಲ್ಲಿ ಕೆಲಸ ಮಾಡುವವರು ಉದ್ಯೋಗ ಕಡಿತದಿಂದ ಹೆಚ್ಚು ಹಾನಿಗೊಳಗಾಗುವ ಸಾಧ್ಯತೆಯಿದೆ.
ಕಳೆದ ಬಾರಿ ಉದ್ಯೋಗ ಕಡಿತದ ಸಮಯದಲ್ಲಿ, ಉದ್ಯೋಗಿಗಳಿಗೆ ಸಮಗ್ರ ಉದ್ಯೋಗಿ ಸಹಾಯ ಯೋಜನೆಯನ್ನು ನೀಡುವುದಾಗಿ ಕಂಪನಿ ಭರವಸೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


