ವಿದೇಶಗಳಲ್ಲಿ ಯುಪಿಐ ವಿಸ್ತರಿಸಲು ಗೂಗಲ್ ಪೇ- ಎನ್ ಪಿ ಸಿಐ ಪಾಲುದಾರಿಕೆ
ಯುಪಿಐ ನ ಜಾಗತಿಕ ವಿಸ್ತರಣೆಗಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ನ ಅಂಗಸಂಸ್ಥೆಯೊಂದಿಗೆ ಗೂಗಲ್ ಪೇ ಒಡಂಬಡಿಕೆ ಮಾಡಿಕೊಂಡಿದೆ.

ನವದೆಹಲಿ: ಯುಪಿಐ ನ ಜಾಗತಿಕ ವಿಸ್ತರಣೆಗಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ನ ಅಂಗಸಂಸ್ಥೆಯೊಂದಿಗೆ ಗೂಗಲ್ ಪೇ ಒಡಂಬಡಿಕೆ ಮಾಡಿಕೊಂಡಿದೆ.
ಎನ್ ಪಿ ಸಿಐ ಇಂಟರ್ ನ್ಯಾಷನಲ್ಸ್ ಪೇಮೆಂಟ್ಸ್ ಲಿಮಿಟೆಡ್ ನೊಂದಿಗೆ ಗೂಗಲ್ ಪೇ ಎಂಒಯುಗೆ ಸಹಿ ಹಾಕಿದೆ.
ಅಮೇರಿಕಾದ ಟೆಕ್ ದೈತ್ಯ ಸಂಸ್ಥೆಯ ಭಾರತದ ಹೊರಭಾಗದಲ್ಲೂ ಪ್ರವಾಸಿಗರು, ಪ್ರಯಾಣಿಕರಿಗೆ ಯುಪಿಐ ಪಾವತಿಗಳನ್ನು ಸುಲಭವಾಗಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.
ವಿದೇಶಗಳಲ್ಲಿ, ತಡೆರಹಿತ ಹಣಕಾಸು ವ್ಯವಹಾರಗಳಿಗೆ ಮಾದರಿಯನ್ನು ಒದಗಿಸಲು ಯುಪಿಐ ಮಾದರಿಯ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸ್ಥಾಪಿಸುವುದಕ್ಕೂ ಈ ಒಪ್ಪಂದ ಸಹಕಾರಿಯಾಗಲಿದೆ.
ಈ ಒಪ್ಪಂದ UPI ಮೂಲಸೌಕರ್ಯವನ್ನು ಬಳಸಿಕೊಳ್ಳುವ ಮೂಲಕ ದೇಶಗಳ ನಡುವಿನ ಹಣ ರವಾನೆ ಪ್ರಕ್ರಿಯೆಯನ್ನು ಸರಾಗಗೊಳಿಸುವತ್ತ ಗಮನಹರಿಸುತ್ತದೆ, ಇದರಿಂದಾಗಿ ಗಡಿಯಾಚೆಗಿನ ಹಣಕಾಸು ವಿನಿಮಯ ಸರಳಗೊಳ್ಳಲಿದೆ.
ಈ ಸಹಯೋಗದ ವ್ಯಾಪ್ತಿಯ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ ಎಂದು ಗೂಗಲ್ ಪೇ ಇಂಡಿಯಾದ ಪಾಲುದಾರಿಕೆಗಳ ನಿರ್ದೇಶಕಿ ದೀಕ್ಷಾ ಕೌಶಲ್ ಹೇಳಿದ್ದಾರೆ.
NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL) ನ ಸಿಇಒ ರಿತೇಶ್ ಶುಕ್ಲಾ, ಈ ಕಾರ್ಯತಂತ್ರದ ಪಾಲುದಾರಿಕೆ ಭಾರತೀಯ ಪ್ರಯಾಣಿಕರಿಗೆ ವಿದೇಶಿ ವಹಿವಾಟುಗಳನ್ನು ಸರಳಗೊಳಿಸುವುದಲ್ಲದೆ, ಇತರ ದೇಶಗಳಿಗೆ ಯಶಸ್ವಿ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಜ್ಞಾನ ಮತ್ತು ಪರಿಣತಿಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ
"ಯುಪಿಐನ ಕ್ರಾಸ್-ಬಾರ್ಡರ್ ಇಂಟರ್‌ಆಪರೇಬಿಲಿಟಿ ವೈಶಿಷ್ಟ್ಯವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ತಡೆರಹಿತ ಮತ್ತು ಹೆಚ್ಚು ಸಂಪರ್ಕಗೊಂಡಿರುವ ಅಂತರಾಷ್ಟ್ರೀಯ ವಹಿವಾಟು ಜಾಲವನ್ನು ಸಕ್ರಿಯಗೊಳಿಸುವ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದು ಶುಕ್ಲಾ ಹೇಳಿದರು.
UPI ನ ಜಾಗತಿಕ ವಿಸ್ತರಣೆ ಅಂತರಾಷ್ಟ್ರೀಯ ವಾಣಿಜ್ಯ ಕ್ಷೇತ್ರದಲ್ಲಿ ಪರಿವರ್ತನೆಯ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ, ಇದು ವಿಶ್ವದಾದ್ಯಂತ ವ್ಯಾಪಾರಿಗಳು ಮತ್ತು ಗ್ರಾಹಕರಿಬ್ಬರಿಗೂ ತಡೆರಹಿತ, ಸುರಕ್ಷಿತ ಮತ್ತು ವೆಚ್ಚ-ಪರಿಣಾಮಕಾರಿ ಪಾವತಿ ಮಾರ್ಗವನ್ನು ಸಕ್ರಿಯಗೊಳಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


