Gold rate today: ಚಿನ್ನದ ಬೆಲೆ ಮತ್ತೆ ಗಗನಕ್ಕೆ, ಬೆಳ್ಳಿ ಇಳಿಕೆ; 73 ಸಾವಿರ ಗಡಿ ದಾಟಿದ ಹಳದಿ ಲೋಹ!
ಯುಗಾದಿ ಹಬ್ಬದ ಬಳಿಕ ಚಿನ್ನದ ದರ ಏರಿಕೆ ಕ್ರಮೇಣ ಮುಂದುವರೆದಿದ್ದು, ಶುಕ್ರವಾರವೂ ಕೂಡ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಮುಂಬೈ: ಯುಗಾದಿ ಹಬ್ಬದ ಬಳಿಕ ಚಿನ್ನದ ದರ ಏರಿಕೆ ಕ್ರಮೇಣ ಮುಂದುವರೆದಿದ್ದು, ಶುಕ್ರವಾರವೂ ಕೂಡ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ಹೌದು.. ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಶುಕ್ರವಾರ ಕೂಡ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ದರ 73 ಸಾವಿರ ರೂ ಗಡಿ ದಾಟಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ಅಂದಾಜಿತ್ತು. ಆದರೆ, ಕಳೆದ ಭಾನುವಾರ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಆದರೆ ಸೋಮವಾರದಿಂದ ಹಳದಿ ಲೋಹದ ಬೆಲೆಯಲ್ಲಿ ಕ್ರಮೇಣ ಏರಿಕೆ ಕಂಡು ಬರುತ್ತಿದೆ.
ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 22 ಕ್ಯಾರಟ್ ಚಿನ್ನದ ದರದಲ್ಲಿ ಬರೊಬ್ಬರಿ 100 ರೂ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 109 ರೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್ ಚಿನ್ನ 6,720ರೂ ಇದ್ದು, 24 ಕ್ಯಾರಟ್ ಚಿನ್ನದರ 7,331 ರೂಗೆ ಏರಿಕೆಯಾಗಿದೆ.

ಬೆಳ್ಳಿ ದರ ಇಳಿಕೆ
ಅತ್ತ ಚಿನ್ನ ಗಗನಮುಖಿಯಾಗಿದ್ದರೂ ಬೆಳ್ಳಿ ದರಗಳು ಮಾತ್ರ ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಯ (Silver rate today) ಬೆಲೆಯಲ್ಲಿ 25ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರ 84.25ನಷ್ಟಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



