Gold rate today: ಚಿನ್ನ-ಬೆಳ್ಳಿ ದರದಲ್ಲಿ ಬುಧವಾರವೂ ಏರಿಕೆ; ಬೆಂಗಳೂರಿನಲ್ಲಿ ಬೆಲೆ ಏಷ್ಟು? ಇಲ್ಲಿದೆ ಮಾಹಿತಿ!
ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಬುಧವಾರ ಕೂಡ ಏರಿಕೆ ಕಂಡುಬಂದಿದ್ದು, ಯುಗಾದಿ ಹಬ್ಬದ ಬಳಿಕ ಸತತ 2ನೇ ದಿನವೂ ಬೆಲೆ ಏರಿಕೆ ಕಂಡುಬಂದಿದೆ.

ಮುಂಬೈ: ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಬುಧವಾರ ಕೂಡ ಏರಿಕೆ ಕಂಡುಬಂದಿದ್ದು, ಯುಗಾದಿ ಹಬ್ಬದ ಬಳಿಕ ಸತತ 2ನೇ ದಿನವೂ ಬೆಲೆ ಏರಿಕೆ ಕಂಡುಬಂದಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ಅಂದಾಜಿತ್ತು. ಆದರೆ, ಭಾನುವಾರ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಆದರೆ ಸೋಮವಾರ ಮತ್ತು ಹಬ್ಬದ ದಿನ ಮಂಗಳವಾರ ಅಂದರೆ ನಿನ್ನೆ ಅಲ್ಪ ಪ್ರಮಾಣದಲ್ಲಿ ದರ ಏರಿಕೆಯಾಗಿತ್ತು. ಇದೀಗ ಸತತ ಮೂರನೇ ದಿನವೂ ಹಳದಿ ಲೋಹದ ದರದಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದೆ.
22 ಕ್ಯಾರಟ್ ಚಿನ್ನದ ದರದಲ್ಲಿ 35 ರೂ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 38 ರೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್ ಚಿನ್ನ 6,610ರೂ ಇದ್ದು, 24 ಕ್ಯಾರಟ್ ಚಿನ್ನದರ 7,211 ರೂ ಇದೆ.

ಬೆಳ್ಳಿ ದರವೂ ಏರಿಕೆ
ಇತ್ತ ಚಿನ್ನ ಮಾತ್ರವಲ್ಲದೇ ಬೆಳ್ಳಿ ದರದಲ್ಲೂ ಸತತ ಏರಿಕೆ ಕಂಡುಬರುತ್ತಿದ್ದು, ಇಂದು ಒಂದು ಗ್ರಾಂ ಬೆಳ್ಳಿಯ (Silver rate today) ಬೆಲೆಯಲ್ಲಿ ಒಂದು ರೂ ಹೆಚ್ಚಳವಾಗಿ 83.75 ರೂಗೆ ಏರಿಕೆಯಾಗಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


