ಆರ್ಥಿಕ ಮುಗ್ಗಟ್ಟು: 500 ಉದ್ಯೋಗಿಗಳನ್ನು ನೌಕರಿಯಿಂದ ತೆಗೆಯಲು ಬೈಜೂಸ್ ಮುಂದು!
ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಬೈಜೂಸ್ ಸೇಲ್ಸ್ ಸೇರಿದಂತೆ ಹಲವು ವಿಭಾಗಗಳಿಂದ 500 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ನಿರ್ಧರಿಸಿದೆ. ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಉದ್ಯಮದ ಪುನರ್ರಚನೆಯ ಹಂತದಲ್ಲಿರುವುದಾಗಿ ಬೈಜೂಸ್ ತಿಳಿಸಿದೆ.

ನವದೆಹಲಿ: ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಬೈಜೂಸ್ ಸೇಲ್ಸ್ ಸೇರಿದಂತೆ ಹಲವು ವಿಭಾಗಗಳಿಂದ 500 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ನಿರ್ಧರಿಸಿದೆ. ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಉದ್ಯಮದ ಪುನರ್ರಚನೆಯ ಹಂತದಲ್ಲಿರುವುದಾಗಿ ಬೈಜೂಸ್ ತಿಳಿಸಿದೆ.
ಎಂಬಾಟಲ್ಡ್ ಎಡ್ಟೆಕ್ ಕಂಪನಿಯಲ್ಲಿ ವಜಾಗೊಳಿಸುವಿಕೆ 15-20 ದಿನಗಳ ಹಿಂದೆ ಪ್ರಾರಂಭವಾಗಿದೆ. ಇದು 500 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ಸುತ್ತಿನ ಉದ್ಯೋಗ ಕಡಿತ ಸೇಲ್ಸ್, ಶಿಕ್ಷಕರು ಮತ್ತು ಕೆಲವು ಬೋಧನಾ ಕೇಂದ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲಾಗಿದೆ.
ವಜಾಗೊಳಿಸುವಿಕೆಗೆ ಸಂಬಂಧಿಸಿದಂತೆ ತನ್ನ ಕೆಲವು ಹೂಡಿಕೆದಾರರೊಂದಿಗೆ ಕಾನೂನು ವಿವಾದದಲ್ಲಿ ಸಿಲುಕಿರುವ ಬೈಜುಸ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



