Byjus: 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಗೆ ಕುಸಿತ
ಸಾಲ, ತೆರಿಗೆ ವಿವಾದ, ನಷ್ಟ ಇತ್ಯಾದಿಗಳಿಂದ ಸಾಕಷ್ಟು ವಿವಾದಗಳಿಗೆ ತುತ್ತಾಗಿರುವ ಖ್ಯಾತ ಖಾಸಗಿ ಶೈಕ್ಷಣಿಕ ಸ್ಟಾರ್ಟಪ್ ಬೈಜೂಸ್ ದುರಂತದ ಸರಮಾಲೆ ಮುಂದುವರೆದಿದ್ದು, ಬೈಜುಸ್ನ ಮೌಲ್ಯ (Valuation of Byju’s) ಈಗ ನೆಲಕಚ್ಚಿದೆ.

ಮುಂಬೈ: ಸಾಲ, ತೆರಿಗೆ ವಿವಾದ, ನಷ್ಟ ಇತ್ಯಾದಿಗಳಿಂದ ಸಾಕಷ್ಟು ವಿವಾದಗಳಿಗೆ ತುತ್ತಾಗಿರುವ ಖ್ಯಾತ ಖಾಸಗಿ ಶೈಕ್ಷಣಿಕ ಸ್ಟಾರ್ಟಪ್ ಬೈಜೂಸ್ ದುರಂತದ ಸರಮಾಲೆ ಮುಂದುವರೆದಿದ್ದು, ಬೈಜುಸ್ನ ಮೌಲ್ಯ (Valuation of Byju’s) ಈಗ ನೆಲಕಚ್ಚಿದೆ.
ಹೌದು.. ಒಂದು ಕಾಲದಲ್ಲಿ ಭಾರತದ ಸ್ಟಾರ್ಟಪ್ ಸೂಪರ್ಸ್ಟಾರ್ ಎನಿಸಿದ್ದ ಬೈಜುಸ್ ಈಗ ದಯನೀಯ ಸ್ಥಿತಿಗೆ ಕುಸಿದಿದ್ದು, 22 ಬಿಲಿಯನ್ ಡಾಲರ್ ಇದ್ದ ಬೈಜುಸ್ ಮೌಲ್ಯ ಈಗ 3 ಬಿಲಿಯನ್ ಗಿಂತ ಕಡಿಮೆ ಮೊತ್ತಕ್ಕೆ ಕುಸಿದಿದೆ. ಬೈಜುಸ್ನಲ್ಲಿ ಸುಮಾರು 9.6% ಪಾಲನ್ನು ಹೊಂದಿರುವ ನೆದರ್ಲ್ಯಾಂಡ್ಸ್ ಮೂಲದ ತಂತ್ರಜ್ಞಾನ ಹೂಡಿಕೆದಾರ ಪ್ರೊಸಸ್ (Prosus), ಸ್ಟಾರ್ಟ್ಅಪ್ನ ಮೌಲ್ಯಮಾಪನವನ್ನು $3 ಬಿಲಿಯನ್ಗಿಂತ ಕಡಿಮೆಗೆ ಗುರುತಿಸಿದೆ. ಕಳೆದ ವರ್ಷವಷ್ಟೇ ಬೈಜುಸ್ನ ಮೌಲ್ಯ 22 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು. ಈಗ ಒಂದೇ ವರ್ಷದಲ್ಲಿ ಶೇ. 86ರಷ್ಟು ಮೌಲ್ಯ ಕಳೆದುಕೊಂಡಿದೆ.
ಪ್ರೋಸುಸ್, ಬ್ಲ್ಯಾಕ್ರಾಕ್ ಮೊದಲಾದ ಬೈಜುಸ್ ಷೇರುದಾರರು ಕಳೆದ ಒಂದು ವರ್ಷದಿಂದಲೂ ಕೂಡ ಮೌಲ್ಯ ಕಡಿತಗೊಳಿಸುತ್ತಲೇ ಬಂದಿವೆ. 22 ಬಿಲಿಯನ್ ಡಾಲರ್ ಇದ್ದ ಬೈಜುಸ್ನ ಮೌಲ್ಯ ಮಾರ್ಚ್ ತಿಂಗಳಲ್ಲಿ 11 ಬಿಲಿಯನ್ ಡಾಲರ್, ಮೇ ತಿಂಗಳಲ್ಲಿ 8 ಬಿಲಿಯನ್ ಡಾಲರ್, ಜೂನ್ ತಿಂಗಳಲ್ಲಿ 5 ಬಿಲಿಯನ್ ಡಾಲರ್ಗೆ ಕಡಿತಗೊಳಿಸಲಾಗಿದೆ. ಇದೀಗ 3 ಬಿಲಿಯನ್ ಡಾಲರ್ಗಿಂತ ಕಡಿಮೆ ಮೌಲ್ಯಕ್ಕೆ ಬೈಜುಸ್ ಕುಸಿದಿದೆ.
ಬೈಜುಸ್ ಸಂಸ್ಥೆ ಬಹಳ ವಿಳಂಬವಾಗಿ ಬಿಡುಗಡೆ ಮಾಡಿದ 2021-22ರ ಹಣಕಾಸು ವರ್ಷದ ತನ್ನ ಆದಾಯದ ವರದಿಯಲ್ಲಿ, ಅದು ಸಾಕಷ್ಟು ಆದಾಯವೃದ್ಧಿ ಕಂಡಿದೆಯಾದರೂ ಲಾಭ ಕಾಣದೇ 2,250 ಕೋಟಿ ರೂ ನಷ್ಟ ಅನುಭವಿಸಿರುವುದು ತಿಳಿದುಬಂದಿದೆ. ಹಣಕಾಸು ವರದಿ ವಿಳಂಬಗೊಂಡ ಪರಿಣಾಮ ಬೈಜುಸ್ ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


