ಬೈಜುಸ್

ಒಂದು ಕಾಲದ ದೇಶದ ಅತಿದೊಡ್ಡ ಸ್ಟಾರ್ಟಪ್ Byju's ಮೌಲ್ಯ ಈಗ 'ಶೂನ್ಯ'; ‘ಏನೇ ಬರಲಿ, ದಾರಿ ಹುಡುಕುತ್ತೇನೆ’ ಎಂದ ಮಾಲೀಕ!
ವಾಣಿಜ್ಯ

ಒಂದು ಕಾಲದ ದೇಶದ ಅತಿದೊಡ್ಡ ಸ್ಟಾರ್ಟಪ್ Byju's ಮೌಲ್ಯ ಈಗ 'ಶೂನ್ಯ'; ‘ಏನೇ ಬರಲಿ, ದಾರಿ ಹುಡುಕುತ್ತೇನೆ’ ಎಂದ ಮಾಲೀಕ!

ತಮ್ಮ ಶಿಕ್ಷಣ-ತಂತ್ರಜ್ಞಾನ ಕಂಪನಿ ಬೈಜೂಸ್ ನ ಬೆಳವಣಿಗೆಯ ಸಾಮರ್ಥ್ಯವನ್ನು ನಾನು ಅತಿಯಾಗಿ ಅಂದಾಜು ಮಾಡಿದ್ದೆ. ಆದರೆ ಅದು ಈಗ "ಶೂನ್ಯ" ಮೌಲ್ಯದಲ್ಲಿದ್ದು ದಿವಾಳಿತನವನ್ನು ಎದುರಿಸುತ್ತಿದೆ. ಆದರೂ ಅದನ್ನು ಉಳಿಸುವ ಭರವಸೆಯನ್ನು ಹೊಂದಿದ್ದೇನೆ ಎಂದು ರವೀಂದ್ರನ್ ಹೇಳಿದ್ದಾರೆ.

ಬೈಜೂಸ್ ಬಿಕ್ಕಟ್ಟು: ಫೆಬ್ರವರಿ ವೇತನವೂ ವಿಳಂಬ, ಅಡಕತ್ತರಿಯಲ್ಲಿ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು!
ವಾಣಿಜ್ಯ

ಬೈಜೂಸ್ ಬಿಕ್ಕಟ್ಟು: ಫೆಬ್ರವರಿ ವೇತನವೂ ವಿಳಂಬ, ಅಡಕತ್ತರಿಯಲ್ಲಿ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು!

ಎಡ್ಟೆಕ್ ಕಂಪನಿ ಬೈಜೂಸ್ ನ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ಫೆಬ್ರವರಿ ತಿಂಗಳ ವೇತನ ಕೂಡ ವಿಳಂಬವಾಗಲಿದೆ ಎಂದು ಹೇಳಲಾಗಿದೆ. ಅದರಂತೆ ಸಂಸ್ಥೆಯ ಸುಮಾರು 20 ಸಾವಿರ ಉದ್ಯೋಗಿಗಳು ಇದೀಗ ಅಡಕತ್ತರಿಯಲ್ಲಿ ಸಿಲುಕಿದ್ದು, ಸಂಸ್ಥೆ ಮಾತ್ರ ಹೂಡಿಕೆದಾರರನ್ನು ದೂಷಿಸುತ್ತಿದೆ.

ಬೈಜುಸ್ ಷೇರುದಾರರ ಸಭೆ; ರವೀಂದ್ರನ್, ಕುಟುಂಬಸ್ಥರ ಪದಚ್ಯುತಿಗೆ ಮತ!
ವಾಣಿಜ್ಯ

ಬೈಜುಸ್ ಷೇರುದಾರರ ಸಭೆ; ರವೀಂದ್ರನ್, ಕುಟುಂಬಸ್ಥರ ಪದಚ್ಯುತಿಗೆ ಮತ!

ದೇಶದ ಪ್ರಮುಖ ಟೆಕ್ ಸ್ಟಾರ್ಟ್ ಅಪ್ ಗಳಲ್ಲಿ ಒಂದಾದ ಬೈಜುಸ್ ಕಂಪನಿಯ ಆಡಳಿತ ಮಂಡಳಿಯಿಂದ ಸಿಇಒ ಬೈಜು ರವೀಂದ್ರನ್ ಹಾಗೂ ಅವರ ಕುಟುಂಬಸ್ಥರನ್ನು ಪದಚ್ಯುತಿಗೊಳಿಸಲು ಇಂದು ನಡೆದ ಷೇರುದಾರರ ವಿಶೇಷ ಸಾಮಾನ್ಯ ಸಭೆಯಲ್ಲಿ ಶೇ. 60 ಕ್ಕೂ ಹೆಚ್ಚು ಷೇರುದಾರರು ಮತ ಚಲಾಯಿಸಿದ್ದಾರೆ.

Byjus: 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಗೆ ಕುಸಿತ
ವಾಣಿಜ್ಯ

Byjus: 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಗೆ ಕುಸಿತ

ಸಾಲ, ತೆರಿಗೆ ವಿವಾದ, ನಷ್ಟ ಇತ್ಯಾದಿಗಳಿಂದ ಸಾಕಷ್ಟು ವಿವಾದಗಳಿಗೆ ತುತ್ತಾಗಿರುವ ಖ್ಯಾತ ಖಾಸಗಿ ಶೈಕ್ಷಣಿಕ ಸ್ಟಾರ್ಟಪ್ ಬೈಜೂಸ್ ದುರಂತದ ಸರಮಾಲೆ ಮುಂದುವರೆದಿದ್ದು, ಬೈಜುಸ್​ನ ಮೌಲ್ಯ (Valuation of Byju’s) ಈಗ ನೆಲಕಚ್ಚಿದೆ.

2500 ಉದ್ಯೋಗಿಗಳ ವಜಾಗೊಳಿಸಲು ಬೈಜುಸ್ ಮುಂದು, 10 ಸಾವಿರ ಶಿಕ್ಷಕರ ನೇಮಕ
ವಾಣಿಜ್ಯ

2500 ಉದ್ಯೋಗಿಗಳ ವಜಾಗೊಳಿಸಲು ಬೈಜುಸ್ ಮುಂದು, 10 ಸಾವಿರ ಶಿಕ್ಷಕರ ನೇಮಕ

ಮಾರ್ಚ್ 2023 ರೊಳಗೆ ಲಾಭದಾಯಕವಾಗಲು ಯೋಜನೆ ರೂಪಿಸಿರುವ ಜನಪ್ರಿಯ ಶೈಕ್ಷಣಿಕ ಆಪ್ ಬೈಜುಸ್ ಮುಂದಿನ ಆರು ತಿಂಗಳಲ್ಲಿ 2,500 ಅಥವಾ ಶೇ. 5 ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಯೋಜಿಸಿದೆ.

ಬೈಜುಸ್ ನಿಂದ ನೀರಜ್ ಚೋಪ್ರಾಗೆ 2 ಕೋಟಿ, ಇತರ ಪದಕ ವಿಜೇತರಿಗೆ ತಲಾ 1 ಕೋಟಿ ನಗದು ಬಹುಮಾನ ಘೋಷಣೆ
ಕ್ರೀಡೆ

ಬೈಜುಸ್ ನಿಂದ ನೀರಜ್ ಚೋಪ್ರಾಗೆ 2 ಕೋಟಿ, ಇತರ ಪದಕ ವಿಜೇತರಿಗೆ ತಲಾ 1 ಕೋಟಿ ನಗದು ಬಹುಮಾನ ಘೋಷಣೆ

ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕರಾದ ಬೈಜುಸ್, ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ 2 ಕೋಟಿ ನಗದು ಬಹುಮಾನವನ್ನು ಘೋಷಿಸಿದೆ.