ವಾಣಿಜ್ಯ

ಲಿಂಡಾ ಯಕ್ಕರಿನೋ ಟ್ವಿಟರ್ ನ ನೂತನ ಸಿಇಒ

NBC ಯುನಿವರ್ಸಲ್ ನ ಜಾಗತಿಕ ಜಾಹೀರಾತು ಮತ್ತು ಪಾಲುದಾರಿಕೆಗಳ ಅಧ್ಯಕ್ಷರಾಗಿರುವ ಲಿಂಡಾ ಯಕ್ಕರಿನೋ ಟ್ವಿಟರ್ ನ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ.

ಲಿಂಡಾ ಯಕ್ಕರಿನೋ ಟ್ವಿಟರ್ ನ ನೂತನ ಸಿಇಒ
ಲಿಂಡಾ ಯಕ್ಕರಿನೋ ಟ್ವಿಟರ್ ನ ನೂತನ ಸಿಇಒ
Published On :

ನವದೆಹಲಿ: NBC ಯುನಿವರ್ಸಲ್ ನ ಜಾಗತಿಕ ಜಾಹೀರಾತು ಮತ್ತು ಪಾಲುದಾರಿಕೆಗಳ ಅಧ್ಯಕ್ಷರಾಗಿರುವ ಲಿಂಡಾ ಯಕ್ಕರಿನೋ ಟ್ವಿಟರ್ ನ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ.

ಟ್ವಿಟರ್ ನ ನಿರ್ಗಮಿತ ಸಿಇಒ ಎಲಾನ್ ಮಸ್ಕ್ ಲಿಂಡಾ ಅವರನ್ನು ನೂತನ ಸಿಇಒ ನ್ನಾಗಿ ಘೋಷಿಸಿದ್ದಾರೆ. ಮಿಯಾಮಿ ನಲ್ಲಿ ನಡೆದ ಜಾಹಿರಾತು ಕಾರ್ಯಕ್ರಮದಲ್ಲಿ ಯಕ್ಕರಿನೋ ಮಸ್ಕ್ ಅವರನ್ನು ವೇದಿಕೆ ಮೇಲೆ ಸಂದರ್ಶಿಸಿದ್ದರು.

ಇದಕ್ಕೂ ಮುನ್ನ ಟ್ವಿಟರ್ ಗೆ ಹೊಸ ಸಿಇಒ ನ್ನು ಆಯ್ಕೆ ಮಾಡಿರುವುದಾಗಿ ಹೇಳಿ ಮಸ್ಕ್ ಕುತೂಹಲ ಮೂಡಿಸಿದ್ದರು. ಆಕೆ 6 ವಾರಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳುವ ಮೂಲಕ ಟ್ವಿಟರ್ ನ ಮುಂದಿನ ಸಿಇಒ ಓರ್ವ ಮಹಿಳೆ ಎಂಬ ಸುಳಿವು ನೀಡಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಮಸ್ಕ್ ಲಿಂಡಾ ಅವರನ್ನು ಟ್ವಿಟರ್ ನ ನೂತನ ಸಿಇಒ ಎಂದು ಘೋಷಿಸಿದ್ದಾರೆ. ನಾನು ಉತ್ಪನ್ನ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸುತ್ತೇನೆ ಆದರೆ ಲಿಂಡಾ ವ್ಯಾಪಾರದ ಆಪ್‌ಗಳ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ಮಸ್ಕ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.