ಸಗಟು ಹಣದುಬ್ಬರ 2 ವರ್ಷಗಳಲ್ಲೇ ಅತ್ಯಧಿಕ ಕುಸಿತ!
ಸಗಟು ಹಣದುಬ್ಬರ 2 ವರ್ಷಗಳಲ್ಲೇ ಅತ್ಯಧಿಕ ಕುಸಿತ ಕಂಡಿದೆ.

ನವದೆಹಲಿ: ಸಗಟು ಹಣದುಬ್ಬರ 2 ವರ್ಷಗಳಲ್ಲೇ ಅತ್ಯಧಿಕ ಕುಸಿತ ಕಂಡಿದೆ. ಜನವರಿ ತಿಂಗಳ ಸಗಟು ಹಣದುಬ್ಬರ ಸೂಚ್ಯಂಕ ಶೇ.3.85 ಕ್ಕೆ ಕುಸಿದಿದ್ದು, ಉತ್ಪಾದಿತ ವಸ್ತುಗಳ ಬೆಲೆ, ಇಂಧನ, ವಿದ್ಯುತ್ ಬೆಲೆ ಕಡಿಮೆಯಾಗಿರುವ ಪರಿಣಾಮ ಎಂದು ವಿಶ್ಲೇಷಿಸಲಾಗುತ್ತಿದೆ.
ಸತತ 9 ನೇ ತಿಂಗಳು ಸಗಟು ಬೆಲೆ ಸೂಚ್ಯಂಕ (WPI) ಆಧಾರಿತ ಹಣದುಬ್ಬರ ಇಳಿಕೆ ಕಂಡಿದೆ. ಕಳೆದ ವರ್ಷ ಡಬ್ಲ್ಯುಪಿಐ ಹಣದುಬ್ಬರ ಶೇ.4.73 ರಷ್ಟಿತ್ತು ಹಾಗೂ ಫೆಬ್ರವರಿ ತಿಂಗಳಲ್ಲಿ ಶೇ.13.43 ರಷ್ಟಿತ್ತು.
ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲಗಳ ಬೆಲೆ, ಆಹಾರೇತರ ಪದಾರ್ಥಗಳು, ಆಹಾರ ಪದಾರ್ಥಗಳು, ಖನಿಜಗಳು, ಕಂಪ್ಯೂಟರ್, ಎಲೆಕ್ಟ್ರಾನಿಕ್ ಮತ್ತು ಆಪ್ಟಿಕಲ್ ಉತ್ಪನ್ನಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ವಿದ್ಯುತ್ ಉಪಕರಣಗಳು ಮತ್ತು ಮೋಟಾರು ವಾಹನಗಳ ಬೆಲೆ ಇಳಿಕೆಯ ಪರಿಣಾಮವಾಗಿ 2023 ರ ಫೆಬ್ರವರಿ ತಿಂಗಳಲ್ಲಿನ ಹಣದುಬ್ಬರ ಇಳಿಕೆಯಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಮಂಗಳವಾರ ತಿಳಿಸಿದೆ.
2021 ಜನವರಿಯಿಂದ ಇದೇ ಮೊದಲ ಬಾರಿಗೆ ಡಬ್ಲ್ಯುಪಿಐ ಹಣದುಬ್ಬರ ಶೇ.3.85 ಕ್ಕೆ ಇಳಿಕೆ ಕಂಡಿದೆ. ಸರಕುಗಳ ಬೆಲೆಗಳ ಇಳಿಕೆಯಿಂದಾಗಿ ಡಬ್ಲ್ಯುಪಿಐ ಹಣದುಬ್ಬರ ಇನ್ನೂ ಕಡಿಮೆಯಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಆದಾಗ್ಯೂ, ಆಹಾರ ಹಣದುಬ್ಬರದ ಭವಿಷ್ಯದ ಹವಾಮಾನ ಸಂಬಂಧಿತ ಪರಿಸ್ಥಿತಿಗಳು ಮತ್ತು ಸಕಾಲಿಕ ಮುಂಗಾರಿನ ಮೇಲೆ ಅವಲಂಬಿಸಿರುತ್ತದೆ ಎಂದು ವಿಶ್ಲೇಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


