ಮೊದಲ ಬಾರಿ 64,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಸಾರ್ವಕಾಲಿಕ ದಾಖಲೆ
ಭಾರತೀಯ ಷೇರು ಮಾರುಕಟ್ಟೆ ಬುಧವಾರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ದಾಖಲೆಯ 64,000 ಅಂಕಗಳ ಗಡಿ ದಾಟಿದೆ ಮತ್ತುನಿಫ್ಟಿ 19,000 ಮಟ್ಟವನ್ನು ದಾಟಿದೆ.

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಬುಧವಾರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ದಾಖಲೆಯ 64,000 ಅಂಕಗಳ ಗಡಿ ದಾಟಿದೆ ಮತ್ತುನಿಫ್ಟಿ 19,000 ಮಟ್ಟವನ್ನು ದಾಟಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ನಂತಹ ಮಾರುಕಟ್ಟೆಯ ದೈತ್ಯ ಷೇರುಗಳಲ್ಲಿ ಕಂಡು ಬಂದ ಖರೀದಿಯ ಆಸಕ್ತಿ ಕೂಡ ಈ ದಾಖಲೆಗೆ ನೆರವಾಯಿತು.
ಹಿಂದಿನ ದಿನದ ಆವೇಗವನ್ನು ವಿಸ್ತರಿಸಿದ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 621.07 ಅಂಕ ಜಿಗಿದು ಮಧ್ಯಾಹ್ನದ ವಹಿವಾಟಿನ ಸಮಯದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ 64,037.10 ಅನ್ನು ತಲುಪಿತ್ತು. ಎನ್ಎಸ್ಇ ನಿಫ್ಟಿ 50ಯು 193.85 ಅಂಕಗಳ ಏರಿಕೆಯೊಂದಿಗೆ ತನ್ನ ಜೀವಿತಾವಧಿಯ ಗರಿಷ್ಠ ಮಟ್ಟ 19,011.25 ಅನ್ನು ಮುಟ್ಟಿತ್ತು.
ಇಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ(ಬಿಎಸ್ಇ) ಒಂದೇ ದಿನ 1.84 ಲಕ್ಷ ಕೋಟಿ ರೂ. ನಷ್ಟು ಬಂಡವಾಳ ಸಂಗ್ರಹ ಹೆಚ್ಚಾಗಿದೆ. ಇದರೊಂದಿಗೆ ಬಿಎಸ್ಇ ಮಾರ್ಕೆಟ್ ಕ್ಯಾಪ್(ಮಾರುಕಟ್ಟೆ ಬಂಡವಾಳ) 293.97 ಲಕ್ಷಕೋಟಿ ರೂ. ಆಗಿದೆ.
ಟಾಟಾ ಮೋಟಾರ್ಸ್, ಸನ್ ಫಾರ್ಮಾ, ಟೈಟಾನ್, ಲಾರ್ಸೆನ್ ಮತ್ತು ಟೂಬ್ರೊ, ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎನ್ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಮಾರುತಿ ಷೇರುಗಳು ಹೆಚ್ಚು ಲಾಭ ಗಳಿಸಿವೆ. ಅಲ್ಲದೆ ಅದಾನಿ ಗ್ರೂಪ್ನ ಬಹುತೇಕ ಷೇರುಗಳು ಸಹ ಬೆಲೆ ಹೆಚ್ಚಿಸಿಕೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


