ಮಾರ್ಚ್ 2023 ರಂತೆ ಕೇಂದ್ರ ಸರ್ಕಾರದ ಒಟ್ಟು ಸಾಲ 156 ಲಕ್ಷ ಕೋಟಿಗೂ ಅಧಿಕ: ಹಿಂದಿನ ವರ್ಷಕ್ಕಿಂತ ಶೇ.11ರಷ್ಟು ಹೆಚ್ಚಳ
2022-23 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಒಟ್ಟು ಸಾಲ (ತಾತ್ಕಾಲಿಕ) 156 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 11.5 ರಷ್ಟು ಹೆಚ್ಚಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸಿವೆ. ಕಳೆದ ವರ್ಷ ಡಿಸೆಂಬರ್ ನಲ್ಲಿದ್ದ ಸಾಲಕ್ಕಿಂತ ಶೇ. 5 ರಷ್ಟು ಹೆಚ್ಚಾಗಿದೆ.

ನವದೆಹಲಿ: 2022-23 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಒಟ್ಟು ಸಾಲ (ತಾತ್ಕಾಲಿಕ) 156 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 11.5 ರಷ್ಟು ಹೆಚ್ಚಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸಿವೆ. ಕಳೆದ ವರ್ಷ ಡಿಸೆಂಬರ್ ನಲ್ಲಿದ್ದ ಸಾಲಕ್ಕಿಂತ ಶೇ. 5 ರಷ್ಟು ಹೆಚ್ಚಾಗಿದೆ.
ಮಾರ್ಚ್ 2023 ರ ಅಂತ್ಯದಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಾಲಗಳಲ್ಲಿ ಶೇ. 95.2 ರಷ್ಟು ದೇಶೀಯ ಕರೆನ್ಸಿಯಲ್ಲಿ ಗುರುತಿಸಲ್ಪಟ್ಟಿದ್ದರೆ, ಬಾಹ್ಯ ಸಾಲವು ಶೇ.4.8 ರಷ್ಟಿದೆ. ಮಾರ್ಚ್ 2023 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಬಾಹ್ಯ ಸಾಲವು ಪ್ರಸ್ತುತದಲ್ಲಿನ ವಿನಿಮಯ ದರದಲ್ಲಿ ರೂ. 7.5 ಲಕ್ಷ ಕೋಟಿಗಳಷ್ಟಿತ್ತು.
ಕೇಂದ್ರ ಸರ್ಕಾರದ ಒಟ್ಟು ಸಾಲವು ಆಂತರಿಕ ಸಾಲ, ಬಾಹ್ಯ ಸಾಲ ಮತ್ತು ಸಣ್ಣ ಉಳಿತಾಯ ಠೇವಣಿಗಳು, ರಾಜ್ಯ ಭವಿಷ್ಯ ನಿಧಿ ಇನ್ನಿತರ ಸಾಲವನ್ನು ಒಳಗೊಂಡಂತೆ 156 ಲಕ್ಷ ಕೋಟಿಯಾಗಿದೆ. ಕೇಂದ್ರ ಸರ್ಕಾರದ ಸಾಲ, ಜಿಡಿಪಿ ಅನುಪಾತವು ಸುಮಾರು ಶೇ. 57 ರಷ್ಟಾಗಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕಿಂತ ಶೇ. 59 ರಷ್ಟು ಕಡಿಮೆಯಾಗಿದೆ. 2020-21 ರಲ್ಲಿ ಶೇ.60ಕ್ಕೆ ಏರಿದ ನಂತರ ಕೇಂದ್ರ ಸರ್ಕಾರದ ಸಾಲದ ಅನುಪಾತ ಕುಸಿಯಲು ಪ್ರಾರಂಭಿಸಿದೆ.
ಇದನ್ನೂ ಓದಿ: ಜೂನ್ ನಲ್ಲಿ ಜಿಎಸ್ ಟಿ ಸಂಗ್ರಹ ಶೇ.12 ರಷ್ಟು ಏರಿಕೆ!
2020-21ರಲ್ಲಿ ಸರ್ಕಾರದ ಸಾಲವು (ಕೇಂದ್ರ ಮತ್ತು ರಾಜ್ಯ ಸರ್ಕಾರ) ಶೇ. 90 ರಷ್ಟಿದೆ ಎಂದು ಒಂದೆರಡು ವರ್ಷಗಳ ಹಿಂದೆ ಕಳವಳ ವ್ಯಕ್ತಪಡಿಸಲಾಗಿತ್ತು. ಆದರೆ ಎರಡು ವರ್ಷಗಳ ನಂತರ ಜಿಡಿಪಿ ಹೆಚ್ಚಳದಿಂದ ಸಾಲದ ಪ್ರಮಾಣ ಕುಸಿದಿದೆ ಎನ್ನಲಾಗಿತ್ತು. ದೇಶದಲ್ಲಿ ಜೆಡಿಪಿ ವೇಗವಾಗಿ ಬೆಳೆಯುತ್ತಿರುವುದು ಸಾಲದ ಕುಸಿತಕ್ಕೆ ಪ್ರಮುಖ ಕಾರಣ ಎಂದು ಇತ್ತೀಚಿಗೆ ರೇಟಿಂಗ್ ಏಜೆನ್ಸಿ ಮೂಡೀಸ್ ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


