ವಾಣಿಜ್ಯಮಾರ್ಚ್ 2023 ರಂತೆ ಕೇಂದ್ರ ಸರ್ಕಾರದ ಒಟ್ಟು ಸಾಲ 156 ಲಕ್ಷ ಕೋಟಿಗೂ ಅಧಿಕ: ಹಿಂದಿನ ವರ್ಷಕ್ಕಿಂತ ಶೇ.11ರಷ್ಟು ಹೆಚ್ಚಳ
2022-23 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಒಟ್ಟು ಸಾಲ (ತಾತ್ಕಾಲಿಕ) 156 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 11.5 ರಷ್ಟು ಹೆಚ್ಚಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸಿವೆ. ಕಳೆದ ವರ್ಷ ಡಿಸೆಂಬರ್ ನಲ್ಲಿದ್ದ ಸಾಲಕ್ಕಿಂತ ಶೇ. 5 ರಷ್ಟು ಹೆಚ್ಚಾಗಿದೆ.