ಜಿಎಸ್ ಟಿ ದರ ಏರಿಕೆ: 350 ಮಂದಿ ನೌಕರಿಗೆ ಗೇಮಿಂಗ್ ಸೈಟ್ ಎಂಪಿಎಲ್ ಕತ್ತರಿ!
ಆನ್ ಲೈನ್ ಕ್ರೀಡಾ ವೇದಿಕೆಯಾಗಿದ್ದ ಮೊಬೈಲ್ ಪ್ರೀಮಿಯರ್ ಲೀಗ್ ತನ್ನ ಸಿಬ್ಬಂದಿಗಳ ಪೈಕಿ 350 ಮಂದಿ ಉದ್ಯೋಗಕ್ಕೆ ಕತ್ತರಿ ಹಾಕಿದೆ.

ನವದೆಹಲಿ: ಆನ್ ಲೈನ್ ಕ್ರೀಡಾ ವೇದಿಕೆಯಾಗಿದ್ದ ಮೊಬೈಲ್ ಪ್ರೀಮಿಯರ್ ಲೀಗ್ ತನ್ನ ಸಿಬ್ಬಂದಿಗಳ ಪೈಕಿ 350 ಮಂದಿ ಉದ್ಯೋಗಕ್ಕೆ ಕತ್ತರಿ ಹಾಕಿದೆ.
ಖರ್ಚು ಕಡಿಮೆ ಮಾಡುವುದಕ್ಕೆ ಹಾಗೂ ಜಿಎಸ್ ಟಿ ಶೇ.28 ರಷ್ಟು ಹೆಚ್ಚಾದ ಪರಿಣಾಮ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಆಂತರಿಕ ಮೇಲ್ ಮೂಲಕ ತಿಳಿದುಬಂದಿದೆ.
ಜಿಎಸ್ ಟಿ ಕೌನ್ಸಿಲ್ ಆನ್ ಲೈನ್ ಗೇಮಿಂಗ್ ಹಾಗೂ ಕ್ಯಾಸಿನೊಗಳ ಮೇಲೆ ಶೇ.28 ರಷ್ಟು ಜಿಎಸ್ ಟಿಯನ್ನು ವಿಧಿಸಿದೆ. ಅಕ್ಟೋಬರ್ 1 ರಿಂದ ನಿಯಮಗಳನ್ನು ಜಾರಿಗೊಳಿಸಲು, ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸೆಂಟ್ರಲ್ ಜಿಎಸ್ ಟಿ ಕಾನೂನಿಗೆ ತಿದ್ದುಪಡಿ ತರಲಿದೆ.
ಗೇಮಿಂಗ್ ನ ನಿವ್ವಳ ಲಾಭದ ಬದಲಾಗಿ ಪೂರ್ಣ ಡೆಪಾಸಿಟ್ ಮೌಲ್ಯದ ಮೇಲೆ ಶೇ.28 ರಷ್ಟು ಜಿಎಸ್ ಟಿ ವಿಧಿಸುವುದು ಕಳೆದವಾರವಷ್ಟೇ ದೃಢಪಟ್ಟಿತ್ತು ಎಂದು ಎಂಪಿಎಲ್ ಸಹ ಸಂಸ್ಥಾಪಕ ಸಾಯಿ ಶ್ರೀನಿವಾಸ್ ಉದ್ಯೋಗಿಗಳಿಗೆ ಕಳಿಸಿರುವ ಮೇಲ್ ನಲ್ಲಿ ತಿಳಿಸಿದ್ದಾರೆ.
ಹೊಸ ನಿಯಮದಿಂದಾಗಿ ನಮ್ಮ ತೆರಿಗೆ ಭಾರ ಶೇ.350-400 ರಷ್ಟು ಏರಿಕೆಯಾಗಲಿದೆ. ಒಂದು ಉದ್ಯಮವಾಗಿ ಶೇ.50-100 ರಷ್ಟು ಏರಿಕೆಯಾಗಿದ್ದರೆ ತಡೆದುಕೊಳ್ಳಬಹುದಾಗಿತ್ತು. ಆದರೆ ಈ ಪರಿಪ್ರಮಾಣದಲ್ಲಿ ದಿಢೀರ್ ಏರಿಕೆಯಾದರೆ, ನಾವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


