ವಾಣಿಜ್ಯ

ಡಿಸೆಂಬರ್ 2021 ರಲ್ಲೇ ಕೋವಿಶೀಲ್ಡ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ: ಪೂನಾವಾಲ

ಕೋವಿಡ್ ಲಸಿಕೆ ಕೋವಿಶೀಲ್ಡ್ ಉತ್ಪಾದನೆಯನ್ನು ಕಳೆದ ವರ್ಷ ಡಿಸೆಂಬರ್ ನಲ್ಲೇ ಸ್ಥಗಿತಗೊಳಿಸಲಾಗಿದೆ ಮತ್ತು ಆ ಸಮಯದಲ್ಲಿ ಲಭ್ಯವಿದ್ದು ಒಟ್ಟು ಸ್ಟಾಕ್‌ನಲ್ಲಿ ಸುಮಾರು 100 ಮಿಲಿಯನ್ ಡೋಸ್‌ ಲಸಿಕೆಯ ಅವಧಿ ಈಗಾಗಲೇ ಮುಗಿದಿದೆ...

ಡಿಸೆಂಬರ್ 2021 ರಲ್ಲೇ ಕೋವಿಶೀಲ್ಡ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ: ಪೂನಾವಾಲ
ಅದಾರ್ ಪೂನಾವಾಲ
Published On :

ಪುಣೆ: ಕೋವಿಡ್ ಲಸಿಕೆ ಕೋವಿಶೀಲ್ಡ್ ಉತ್ಪಾದನೆಯನ್ನು ಕಳೆದ ವರ್ಷ ಡಿಸೆಂಬರ್ ನಲ್ಲೇ ಸ್ಥಗಿತಗೊಳಿಸಲಾಗಿದೆ ಮತ್ತು ಆ ಸಮಯದಲ್ಲಿ ಲಭ್ಯವಿದ್ದು ಒಟ್ಟು ಸ್ಟಾಕ್‌ನಲ್ಲಿ ಸುಮಾರು 100 ಮಿಲಿಯನ್ ಡೋಸ್‌ ಲಸಿಕೆಯ ಅವಧಿ ಈಗಾಗಲೇ ಮುಗಿದಿದೆ ಎಂದು ಲಸಿಕೆ ತಯಾರಕ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಅವರು ಗುರುವಾರ ಹೇಳಿದ್ದಾರೆ.
          
ಪುಣೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಲಸಿಕೆ ತಯಾರಕರ ನೆಟ್‌ವರ್ಕ್‌ನ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೂನಾವಾಲಾ, ಸಾಂಕ್ರಾಮಿಕ ರೋಗ ಮತ್ತು ಲಸಿಕೆಗಳಿಂದ ಜನ ಬೇಸತ್ತು ಹೋಗಿರುವುದರಿಂದ ಬೂಸ್ಟರ್ ಡೋಸ್ ಗಳಿಗೆ ಬೇಡಿಕೆಯಿಲ್ಲ ಎಂದು ಹೇಳಿದ್ದಾರೆ.

"ಡಿಸೆಂಬರ್ 2021 ರಿಂದ ನಾವು ಕೋವಿಶೀಲ್ಡ್‌ನ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಆ ಸಮಯದಲ್ಲಿ ನಮ್ಮಲ್ಲಿ ನೂರಾರು ಮಿಲಿಯನ್ ಡೋಸ್‌ಗಳ ಸ್ಟಾಕ್ ಇತ್ತು ಮತ್ತು ಅದರಲ್ಲಿ 100 ಮಿಲಿಯನ್ ಡೋಸ್‌ಗಳು ಈಗಾಗಲೇ ಅವಧಿ ಮುಗಿದಿವೆ" ಎಂದು ಪೂನಾವಾಲ ತಿಳಿಸಿದ್ದಾರೆ.

ಇದೇ ವೇಳೆ  ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಲಸಿಕೆಗಳನ್ನು ಮಿಶ್ರಣ ಮಾಡಲು ಅನುಮತಿಸಲಾಗಿದೆ ಎಂದು ಅವರು ಹೇಳಿದರು.      

"ಈಗ ಕೋವೋವ್ಯಾಕ್ಸ್ ಅನ್ನು ಎರಡು ವಾರಗಳಲ್ಲಿ ಅನುಮತಿಸಬೇಕು. ಅವರು ಬೂಸ್ಟರ್‌ಗಳನ್ನು ಮಿಶ್ರಣ ಮಾಡುವ ನೀತಿಯನ್ನು ಹೊಂದಿರುತ್ತಾರೆ ಮತ್ತು ಅನುಮತಿ ನೀಡಬಹುದು ಎಂದು ನಾನು ಭಾವಿಸುತ್ತೇನೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಅನುಮತಿಸಿದರೆ, ಬಹುಶಃ ಭಾರತೀಯ ನಿಯಂತ್ರಕರೂ ಅದನ್ನು ಅನುಮತಿಸಬಹುದು ಮತ್ತು ಅನುಮತಿಸಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೂಸ್ಟರ್‌ಗಳಿಗೆ ಯಾವುದೇ ಬೇಡಿಕೆಯಿಲ್ಲ ಎಂದು ಪೂನಾವಾಲ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.