ಫೇಸ್‌ಬುಕ್ ಇಂಡಿಯಾಗೆ ಅಜಿತ್ ಮೋಹನ್ ರಾಜೀನಾಮೆ; ಸ್ನ್ಯಾಪ್ ಸೇರುವ ಸಾಧ್ಯತೆ!
ಫೇಸ್‌ಬುಕ್ ಇಂಡಿಯಾ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾ ಇಂಡಿಯಾ ಪ್ರಕಟಿಸಿದೆ.

ಮುಂಬೈ: ಫೇಸ್‌ಬುಕ್ ಇಂಡಿಯಾ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾ ಇಂಡಿಯಾ ಪ್ರಕಟಿಸಿದೆ.
ವರದಿಗಳ ಪ್ರಕಾರ, ಮೋಹನ್ ಪ್ರತಿಸ್ಪರ್ಧಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಸ್ನ್ಯಾಪ್‌ಗೆ ಸೇರಲಿದ್ದಾರೆ. ಕಂಪನಿಯ ಪ್ರಕಾರ, ಉತ್ತಮ ಅವಕಾಶದ ನಿರೀಕ್ಷೆಯಲ್ಲಿದ್ದ ಅಜಿತ್ ಮೋಹನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದೆ.
ಮೋಹನ್ ನಾಲ್ಕು ವರ್ಷಗಳ ಕಾಲ ಸ್ಟಾರ್ ಇಂಡಿಯಾದ ವೀಡಿಯೊ ಸ್ಟ್ರೀಮಿಂಗ್ ಸೇವೆ ಹಾಟ್‌ಸ್ಟಾರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅಜಿತ್ ಮೋಹನ್ 2019ರ ಜನವರಿಯಲ್ಲಿ ಫೇಸ್‌ಬುಕ್ ಇಂಡಿಯಾವನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ಸೇರಿದರು.
ಮೆಟಾ ಇಂಡಿಯಾದ ನಿರ್ದೇಶಕ ಮತ್ತು ಪಾಲುದಾರಿಕೆ ಮುಖ್ಯಸ್ಥ ಮನೀಶ್ ಚೋಪ್ರಾ ಮಧ್ಯಂತರ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಕಂಪನಿಯ ವಕ್ತಾರರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಇನ್ನು 'ಕಳೆದ ನಾಲ್ಕು ವರ್ಷಗಳ ಅವರ ಅಧಿಕಾರಾವಧಿಯಲ್ಲಿ, ಅಜಿತ್ ಮೋಹನ್ ಅವರು ಭಾರತದಲ್ಲಿ ಕಂಪನಿಯ ಕಾರ್ಯಾಚರಣೆಗಳು ಮತ್ತು ಗಾತ್ರವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ಅವರು ಹೇಳಿದರು
'ನಾವು ಭಾರತಕ್ಕೆ ಬದ್ಧರಾಗಿದ್ದೇವೆ ಮತ್ತು ಎಲ್ಲಾ ಕೆಲಸಗಳನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಬಲವಾದ ನಾಯಕತ್ವ ಮತ್ತು ತಂಡವನ್ನು ಹೊಂದಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


