ದಾಖಲೆ ಕನಿಷ್ಟ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿತ ಪ್ರತಿ ಡಾಲರ್ ಗೆ 78 ರೂ.
ಏರುತ್ತಿರುವ ಹಣದುಬ್ಬರದ ವಿರುದ್ಧ ಹೋರಾಡುವ ಉದ್ದೇಶದಿಂದ ಈ ವಾರ ನಿರೀಕ್ಷಿತ ಅಮೆರಿಕ ಬಡ್ಡಿದರ ಏರಿಕೆಗೆ ಮುಂಚಿತವಾಗಿಯೇ ಭಾರತೀಯ ರೂಪಾಯಿ ಮೌಲ್ಯ ಸೋಮವಾರ ದಾಖಲೆಯ ಮಟ್ಟಕ್ಕೆ ಕುಸಿದಿದೆ.

ಮುಂಬೈ: ಏರುತ್ತಿರುವ ಹಣದುಬ್ಬರದ ವಿರುದ್ಧ ಹೋರಾಡುವ ಉದ್ದೇಶದಿಂದ ಈ ವಾರ ನಿರೀಕ್ಷಿತ ಅಮೆರಿಕ ಬಡ್ಡಿದರ ಏರಿಕೆಗೆ ಮುಂಚಿತವಾಗಿಯೇ ಭಾರತೀಯ ರೂಪಾಯಿ ಮೌಲ್ಯ ಸೋಮವಾರ ದಾಖಲೆಯ ಮಟ್ಟಕ್ಕೆ ಕುಸಿದಿದೆ.
ದೇಶದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ರೂಪಾಯಿ ಮೌಲ್ಯ (Rupee Value) ಕುಸಿಯುತ್ತಿರುವುದು ಹೊಸ ಆತಂಕ ತಂದೊಡ್ಡಿದೆ. ಅಮೆರಿಕದ ಡಾಲರ್ (American Dollor) ಎದುರು ರೂಪಾಯಿ ಮೌಲ್ಯವು ಸೋಮವಾರ (ಜೂನ್ 13) ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವಿವಿಧ ದೇಶಗಳಲ್ಲಿ ಷೇರುಪೇಟೆ (Share Market) ಕುಸಿಯುತ್ತಿರುವುದು ಮತ್ತು ಬಾಂಡ್ಗಳ ಯೀಲ್ಡ್ (Bond Yield) ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಆದರೆ ಅಮೆರಿಕದ ಡಾಲರ್ನತ್ತ ಹೂಡಿಕೆದಾರರ ಆಸಕ್ತಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ರೂಪಾಯಿ ಸೇರಿದಂತೆ ಹಲವು ದೇಶಗಳ ಕರೆನ್ಸಿಗಳ ಮೌಲ್ಯ ಕುಸಿತ ಕಾಣುತ್ತಿದೆ.
ಭಾರತವೂ ಸೇರಿದಂತೆ ಏಷ್ಯಾದ ಷೇರುಪೇಟೆಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಣ ಹಿಂದಕ್ಕೆ ತೆಗೆಯುವುದನ್ನು ಮುಂದುವರಿಸಿದ್ದು, ಇದೂ ಸಹ ಷೇರುಪೇಟೆಯ ಬಗ್ಗೆ ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದೆ. ಬಹುತೇಕರು ಕಾದುನೋಡುವ ತಂತ್ರಕ್ಕೆ ಶರಣಾಗಿದ್ದು, ಇಂಟರ್ಬ್ಯಾಂಕ್ ಫಾರಿನ್ ಎಕ್ಸ್ಚೇಂಜ್ನಲ್ಲಿ ಭಾರತದ ರೂಪಾಯಿಯು ಅಮೆರಿಕದ ಡಾಲರ್ ಎದುರು 78.20 ರೂ ಮೌಲ್ಯದೊಂದಿಗೆ ವಹಿವಾಟು ಆರಂಭಿಸಿತು. ನಂತರ ಒಮ್ಮೆಲೆ 78.29 ರೂಗೆ ಕುಸಿಯಿತು. ಇದು ಹಿಂದಿನ ವಹಿವಾಟಿನ ಮೌಲ್ಯಕ್ಕೆ ಹೋಲಿಸಿದರೆ 36 ಪೈಸೆ ಕಡಿಮೆ ಮತ್ತು ಸಾರ್ವಕಾನಿಕ ಕನಿಷ್ಠ ಮೊತ್ತ ಎನಿಸಿದೆ. ಕಳೆದ ಶುಕ್ರವಾರ ಭಾರದ ರೂಪಾಯಿ ಅಮೆರಿಕದ ಡಾಲರ್ ಎದುರು 19 ಪೈಸೆಗಳಷ್ಟು ಮೌಲ್ಯ ಕಳೆದುಕೊಂಡು, 77.93ರ ಮೌಲ್ಯದಲ್ಲಿ ವಹಿವಾಟು ನಡೆಸಿತ್ತು.
ವಿಶ್ವದ ಪೆಟ್ರೋಲಿಯಂ ಉತ್ಪನ್ನಗಳ ಬೆಂಚ್ಮಾರ್ಕ್ ಎನಿಸಿದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಸಹ ಪ್ರತಿ ಬ್ಯಾರೆಲ್ಗೆ ಶೇ 1.46ರಷ್ಟು ಕಡಿಮೆಯಾಗಿದೆ. ಒಂದು ಬ್ಯಾರೆಲ್ ಕಚ್ಚಾತೈಲಕ್ಕೆ 120.23 ಡಾಲರ್ ಮುಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


