ಬಜೆಟ್ 2022-23: ಹಲವು ತೆರಿಗೆ ವಿನಾಯಿತಿಗಳಿಗೆ ಬ್ರೇಕ್ ಹಾಕಲು ಹಣಕಾಸು ಸಚಿವಾಲಯ ಚಿಂತನೆ; ವಿವರ ಹೀಗಿದೆ...
ಕೇಂದ್ರ ಹಣಕಾಸು ಸಚಿವಾಲಯ 2022-23 ರ ಬಜೆಟ್ ಗೆ ತಯಾರಿ ನಡೆಸುತ್ತಿದ್ದು, ವೈಯಕ್ತಿಕ ಹಾಗೂ ಕಾರ್ಪೊರೇಟ್ ನ ಹಲವು ತೆರಿಗೆ ವಿನಾಯಿತಿಗಳನ್ನು ನಿಲ್ಲಿಸುವ ಸುಳಿವು ನೀಡಿದೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯ 2022-23 ರ ಬಜೆಟ್ ಗೆ ತಯಾರಿ ನಡೆಸುತ್ತಿದ್ದು, ವೈಯಕ್ತಿಕ ಹಾಗೂ ಕಾರ್ಪೊರೇಟ್ ನ ಹಲವು ತೆರಿಗೆ ವಿನಾಯಿತಿಗಳನ್ನು ನಿಲ್ಲಿಸುವ ಸುಳಿವು ನೀಡಿದೆ.
ಯಾವುದನ್ನು ಮುಂದುವರೆಸಬೇಕು ಯಾವುದನ್ನು ಬಿಡಬೇಕು ಎಂಬ ನಿರ್ಧಾರವನ್ನು ಅಂತಿಮಗೊಳಿಸುವುದಕ್ಕೂ ಮುನ್ನ ಸಚಿವಾಲಯ, ಆರ್ಥಿಕ ವೆಚ್ಚಗಳು ಹಾಗೂ ಉಪಯೋಗಗಳನ್ನು ಮೌಲ್ಯಮಾಪನ ಮಾಡಲು ಮುಂದಾಗಿದೆ.
ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ದರವನ್ನು ಕಡಿಮೆ ಮಾಡಿ ಹಾಗೂ ವಿನಾಯಿತಿಗಳನ್ನು ತೆಗೆದುಹಾಕುವ ಮೂಲಕ ತೆರಿಗೆ ಬೇಸ್ ನ್ನು ಹೆಚ್ಚಿಸುವ ಸರ್ಕಾರದ ಯೋಜನೆಯ ಭಾಗವಾಗಿ ಈ ಮೇಲಿನ ಕ್ರಮವನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಬಜೆಟ್ ನಲ್ಲಿ ಒಂದಷ್ಟು ವಿನಾಯಿತಿಗಳನ್ನು ಹಿಂಪಡೆಯಲಾಗಿತ್ತು. ಉಳಿದ ವಿನಾಯಿತಿಗಳನ್ನು ಈ ಬಾರಿ ಮರುಪರಿಶೀಲಿಸಲಾಗುತ್ತಿದೆ. ಕೆಲವು ತೆರಿಗೆ ವಿನಾಯಿತಿಗಳಿಗೆ ಈ ವರ್ಷ ಬ್ರೇಕ್ ಬೀಳಲಿದೆ ಅಥವಾ ಅವುಗಳನ್ನು ಮುಂದುವರೆಸಲು ಹೋಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆದರೆ ನಿರ್ದಿಷ್ಟ ಯೋಜನೆಗಳ ಹೆಸರನ್ನು ಬಹಿರಂಗಪಡಿಸುವುದಕ್ಕೆ ಆ ಅಧಿಕಾರಿ ನಿರಾಕರಿಸಿದ್ದು, ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡುವುದಕ್ಕೆ ನೀಡಲಾಗುತ್ತಿರುವ ಬಂಡವಾಳ ಲಾಭ ತೆರಿಗೆ ವಿನಾಯಿತಿ ಮಾ.2022ಕ್ಕೆ ಅಂತ್ಯಗೊಳ್ಳಲಿದ್ದು ಇದನ್ನು ವಿಸ್ತರಿಸುವ ಇರಾದೆ ಸರ್ಕಾರಕ್ಕೆ ಇಲ್ಲ. ರಫ್ತು ಆಧಾರಿತ ಘಟಕಗಳಿಗೂ ಇದೇ ಅನ್ವಯವಾಗಲಿದೆ
ಇದೇ ವೇಳೆ ಕೈಗಾರಿಕೋದ್ಯಮಿಗಳಿಂದ ಈ ಬಾರಿಯ ಬಜೆಟ್ ಗೆ ಸಲಹೆಗಳನ್ನು ಕೇಳಿರುವ ಹಣಕಾಸು ಸಚಿವಾಲಯ, ಶಿಫಾರಸ್ಸುಗಳನ್ನು ಆರ್ಥಿಕ ಸಮರ್ಥನೆಯೊಂದಿಗೆ ಬೆಂಬಲಿಸಬೇಕೆಂದು ಒತ್ತಾಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


