ಏಪ್ರಿಲ್-ಜೂನ್ ನಲ್ಲಿ ದೇಶದ ಜಿಡಿಪಿ ಶೇ. 20.1ರಷ್ಟು ಪ್ರಗತಿ
2021-22ರ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇಕಡಾ 20.1 ರಷ್ಟು ಬೆಳವಣಿಗೆಯಾಗಿದೆ, ಇದು ಹಿಂದಿನ ವರ್ಷದ ಅವಧಿಯ ಕಡಿಮೆ ಆಧಾರದಿಂದ ಸಹಾಯವಾಯಿತು ಎಂದು ಅಧಿಕೃತ ಅಂಕಿಅಂಶಗಳು ಮಂಗಳವಾರ ತೋರಿಸಿವೆ.

ನವದೆಹಲಿ: 2021-22ರ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇಕಡಾ 20.1 ರಷ್ಟು ಬೆಳವಣಿಗೆಯಾಗಿದೆ, ಇದು ಹಿಂದಿನ ವರ್ಷದ ಅವಧಿಯ ಕಡಿಮೆ ಆಧಾರದಿಂದ ಸಹಾಯವಾಯಿತು ಎಂದು ಅಧಿಕೃತ ಅಂಕಿಅಂಶಗಳು ಮಂಗಳವಾರ ತೋರಿಸಿವೆ.
ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, 2020-21ರ ಅನುಗುಣವಾದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನವು (GDP) ಶೇಕಡಾ 24.4 ರಷ್ಟು ಕುಗ್ಗಿದೆ.
ಕೋವಿಡ್-19 ಸಾಂಕ್ರಾಮಿಕ ಕಾರಣದಿಂದ ಕಳೆದ ವರ್ಷ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಹೇರಿತ್ತು. 2021ರ ಏಪ್ರಿಲ್- ಜೂನ್ ನಲ್ಲಿ ಚೀನಾದಲ್ಲಿ ಶೇ. 7.9 ರಷ್ಟು ಪ್ರಗತಿ ದಾಖಲೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


