ಫೋರ್ಡ್ ಚೆನ್ನೈ ಘಟಕ ಮಾರಾಟಕ್ಕೆ ಖರೀದಿದಾರರೊಡನೆ ಮಾತುಕತೆ: 3,300 ಕೆಲಸಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿ
ಫೋರ್ಡ್ ನ ಬಿಸಿನೆಸ್ ಕೇಂದ್ರ ಮತ್ತು ಉತ್ಪನ್ನ ಅಭಿವೃದ್ಧಿ ಕೇಂದ್ರಗಳು ಎಂದಿನಂತೆ ಚೆನ್ನೈನಲ್ಲಿಯೇ ಕಾರ್ಯನಿರ್ವಹಿಸಲಿದೆ. ಅಲ್ಲಿ 10,000 ಉದ್ಯೋಗಿಗಳಿದ್ದಾರೆ.

ಚೆನ್ನೈ: ಭಾರತದಿಂದ ಕಾಲ್ತೆಗೆಯುತ್ತಿರುವುದಾಗಿ ಅಂತಾರಾಷ್ಟ್ರೀಯ ಅಟೊಮೊಬೈಲ್ ಸಂಸ್ಥೆ ಫೋರ್ಡ್ ಘೋಷಿಸಿದ ಬೆನ್ನಲ್ಲೇ ಚೆನ್ನೈ ಯಲ್ಲಿನ ಸಂಸ್ಥೆಯ ಘಟಕದ ಸಿಬ್ಬಂದಿ ವರ್ಗ, ಘಟಕವನ್ನು ಬೇರೊಂದು ಆಟೊಮೊಬೈಲ್ ಸಂಸ್ಥೆ ಖರೀದಿಸುವ ನಿರೀಕ್ಷೆಯಲ್ಲಿದೆ. ಅದೇ ವಿಚಾರವಾಗಿ ಫೋರ್ಡ್ ಸಂಸ್ಥೆ ಹಲವು ಖರೀದಿದಾರ ಸಂಸ್ಥೆಗಳೊಡನೆ ಮಾತುಕತೆಯಲ್ಲಿ ನಿರತವಾಗಿದೆ ಎನ್ನಲಾಗಿದೆ.
ಫೋರ್ಡ್ ಸಂಸ್ಥೆ ಚೆನ್ನೈ ಮತ್ತು ಗುಜರಾತಿನ ಸನಂದ್ ಎಂಬಲ್ಲಿ ಘಟಕಗಳನ್ನು ಹೊಂದಿದೆ. ಇದೀಗ ಎರಡೂ ಘಟಕಗಳನ್ನು ಮಾರುತ್ತಿದೆ. ಚೆನ್ನೈನ ಘಟಕದಲ್ಲಿ 3,300 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸರ್ಕಾರ ಚೆನ್ನೈಯಲ್ಲಿನ ಸಂಸ್ಥೆಯ ಘಟಕಕ್ಕೆ ಉತ್ತಮ ಹೆಸರಿದೆ. ಹೀಗಾಗಿಲ್ಲಿನ ಸಿಬ್ಬಂದಿ ವರ್ಗ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. 2022 ಜೂನ್ ತನಕವೂ ಸಮಯವಿದೆ. ಅಷ್ಟರೊಳಗೆ ಬೇರೊಂದು ಸಂಸ್ಥೆ ಈ ಘಟಕವನ್ನು ಸ್ವಾಧೀನ ಪಡಿಸಿಕೊಳ್ಳಲಿದೆ ಎಂದಿದೆ.
ಇದನ್ನೂ ಓದಿ: 2021ರಲ್ಲೇ 3ನೇ ಬಾರಿಗೆ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ: ವ್ಯಾಗನಾರ್, ಸ್ವಿಫ್ಟ್, ಬಲೆನೊ ಬೆಲೆಯೆಷ್ಟು ಗೊತ್ತಾ?
ಫೋರ್ಡ್ ಸಂಸ್ಥೆ ಚೆನ್ನೈನಲ್ಲಿನ ಎಂಜಿನ್ ಮತ್ತು ವಾಹನ ಜೋಡಣಾ ಘಟಕಗಳನ್ನು ಮಾತ್ರವೇ ಮುಚ್ಚುತ್ತಿದೆ. ಆದರೆ ಫೋರ್ಡ್ ನ ಬಿಸಿನೆಸ್ ಕೇಂದ್ರ ಮತ್ತು ಉತ್ಪನ್ನ ಅಭಿವೃದ್ಧಿ ಕೇಂದ್ರಗಳು ಎಂದಿನಂತೆ ಚೆನ್ನೈನಲ್ಲಿಯೇ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ. ಈ ವಿಭಾಗದಲ್ಲಿ 10,000 ಮಂದಿ ಕೆಲಸ ಮಾಡುತ್ತಿದ್ದಾರೆ.
Related Article
ಟ್ರೂ ಕಾಲರ್ ಮಾರುಕಟ್ಟೆಯನ್ನು ಕಸಿಯಲು ಭಾರತದ ಟೆಕ್ಕಿಗಳಿಂದ ಭಾರತ್ ಕಾಲರ್ ಐಡಿ ಆಪ್!
ಭಾರತದ ಆರ್ಥಿಕ ಚಟುವಟಿಕೆ ಪಡೆದುಕೊಳ್ಳುತ್ತಿದೆ ವೇಗ; ಭವಿಷ್ಯದಲ್ಲಿ ಸಕಾರಾತ್ಮಕ ಬೆಳವಣಿಗೆ: ಮೂಡೀಸ್
ಎಲ್ಲಾ ಆಕಾರದ ಹಪ್ಪಳಕ್ಕೆ ಜಿಎಸ್ ಟಿಯಿಂದ ವಿನಾಯಿತಿ ಇದೆ: ಸಿಬಿಐಸಿ ಸ್ಪಷ್ಟನೆ
ಭಾರತದಲ್ಲಿನ ಸುದ್ದಿ ತಾಣಗಳನ್ನು ಮುಚ್ಚಿದ ಯಾಹೂ
ಅಗ್ಗದ ಬೆಲೆಯ ಮೊಪೆಡ್ ಗೆ ಐಷಾರಾಮಿ ವಸ್ತುವಿನ ತೆರಿಗೆ ಏಕೆ?: ಕೇಂದ್ರಕ್ಕೆ ಟಿವಿಎಸ್ ಪ್ರಶ್ನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


