ಕನಿಷ್ಠ ಮತ್ತು ರಾಷ್ಟ್ರೀಯ ತಳಹದಿ ವೇತನ ನಿಗದಿಪಡಿಸಲು ವಿಳಂಬ ಮಾಡುವ ಉದ್ದೇಶವಿಲ್ಲ: ಕಾರ್ಮಿಕ ಸಚಿವಾಲಯ
ಕನಿಷ್ಠ ವೇತನ ಮತ್ತು ರಾಷ್ಟ್ರೀಯ ತಳಹದಿ ವೇತನವನ್ನು ನಿಗದಿಪಡಿಸುವಲ್ಲಿ ವಿಳಂಬ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ನವದೆಹಲಿ: ಕನಿಷ್ಠ ವೇತನ ಮತ್ತು ರಾಷ್ಟ್ರೀಯ ತಳಹದಿ ವೇತನವನ್ನು ನಿಗದಿಪಡಿಸುವಲ್ಲಿ ವಿಳಂಬ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಮೂರು ವರ್ಷಗಳ ಅವಧಿಗೆ ತಜ್ಞರ ತಂಡವನ್ನು ರಚಿಸುವುದು ಕನಿಷ್ಠ ವೇತನ ಮತ್ತು ರಾಷ್ಟ್ರೀಯ ತಳಹದಿ ವೇತನ ನಿಗದಿಪಡಿಸುವ ವಿಳಂಬದ ಪ್ರಯತ್ನವಾಗಿದೆ ಎಂಬ ವರದಿಗಳ ಬಿತ್ತರಗೊಂಡ ಬೆನ್ನಲ್ಲೇ ಸಚಿವಾಲಯ ಸ್ಪಷ್ಟನೆ ನೀಡಿದೆ.
ವೇತನ ನಿಗದಿಪಡಿಸುವ ಬಗ್ಗೆ ತಾಂತ್ರಿಕ ಮಾಹಿತಿ ಮತ್ತು ಶಿಫಾರಸುಗಳನ್ನು ಪಡೆಯಲು ಕೇಂದ್ರ ಸರ್ಕಾರ ಖ್ಯಾತ ಅರ್ಥಶಾಸ್ತ್ರಜ್ಞ ಅಜಿತ್ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ತಜ್ಞರ ತಂಡವನ್ನು ರಚಿಸಿದೆ ಎಂದು ಜೂನ್ ಮೊದಲಾರ್ಧದಲ್ಲಿ ಸಚಿವಾಲಯ ಘೋಷಿಸಿತು.
ತಜ್ಞರ ತಂಡದ ಅಧಿಕಾರಾವಧಿ ಮೂರು ವರ್ಷಗಳವರೆಗೆ ಇರಲಿದೆ. ಸರ್ಕಾರವು ಕನಿಷ್ಠ ವೇತನ ಮತ್ತು ರಾಷ್ಟ್ರೀಯ ತಳಹದಿ ವೇತನವನ್ನು ನಿಗದಿಪಡಿಸುವಲ್ಲಿ ವಿಳಂಬಗೊಳಿಸುವ ಪ್ರಯತ್ನ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ?. ಅಲ್ಲದೆ ವಿಳಂಬ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ತಜ್ಞರ ತಂಡದ ಶಿಫಾರಸುಗಳನ್ನು ಆದಷ್ಟು ಬೇಗ ಸರ್ಕಾರಕ್ಕೆ ಸಲ್ಲಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
2021ರ ಜೂನ್ 14ರಂದು ತಂಡ ಮೊದಲ ಸಭೆ ನಡೆದಿದ್ದು ಎರಡನೇ ಸಭೆ ಜೂನ್ 29ಕ್ಕೆ ನಿಗದಿಯಾಗಿದೆ ಎಂದು ಸಚಿಲವಾಯ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


