ವಾಣಿಜ್ಯ

ಐದು ಹೊಸ 'ದೈನಂದಿನ ಅನಿಯಮಿತ ಡೇಟಾ ಬಳಕೆ' ಪ್ರಿಪೇಯ್ಡ್ ಯೋಜನೆ ಪರಿಚಯಿಸಿದ ರಿಲಯನ್ಸ್ ಜಿಯೋ!

ರಿಲಯನ್ಸ್ ಜಿಯೋ ಐದು ಹೊಸ 'ದೈನಂದಿನ ಅನಿಯಮಿತಿ' ಪ್ರಿಪೇಯ್ಡ್ ಮೊಬಿಲಿಟಿ ಕೊಡುಗೆಗಳನ್ನು ಪರಿಚಯಿಸಿದೆ.

ಐದು ಹೊಸ 'ದೈನಂದಿನ ಅನಿಯಮಿತ ಡೇಟಾ ಬಳಕೆ' ಪ್ರಿಪೇಯ್ಡ್ ಯೋಜನೆ ಪರಿಚಯಿಸಿದ ರಿಲಯನ್ಸ್ ಜಿಯೋ!
ರಿಲಯನ್ಸ್ ಜಿಯೋ
Published On :

ನವದೆಹಲಿ: ರಿಲಯನ್ಸ್ ಜಿಯೋ ಐದು ಹೊಸ 'ದೈನಂದಿನ ಅನಿಯಮಿತಿ' ಪ್ರಿಪೇಯ್ಡ್ ಮೊಬಿಲಿಟಿ ಕೊಡುಗೆಗಳನ್ನು ಪರಿಚಯಿಸಿದೆ. 

ಜಿಯೋ ಫ್ರೀಡಂ ಪ್ಲಾನ್ ಯೋಜನೆಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಹೊಸ ಪ್ಲಾನ್ 127 ರೂಪಾಯಿಯೊಂದಿಗೆ  15 ದಿನಗಳಿಗೆ ಮಾನ್ಯತೆ ಇರಲಿದೆ. 15 ದಿನದ ಪ್ಲಾನ್ ನಲ್ಲಿ 12 ಜಿಬಿ ಇಂಟರ್ ನೆಟ್ ಡೇಟಾವನ್ನು ನೀಡಲಾಗಿದ್ದು ಡೇಟಾವನ್ನು 15 ದಿನದೊಳಗೆ ಬಳಕೆ ಮಾಡಬಹುದಾಗಿದೆ.

ಇದೇ ವೇಳೆ 30 ದಿನಗಳು, 60 ದಿನಗಳು, 90 ದಿನಗಳು ಮತ್ತು 365 ದಿನಗಳ ಮಾನ್ಯತೆಯೊಂದಿಗೆ ಇತರ ಯೋಜನೆಗಳನ್ನು ಸಹ ಪರಿಚಯಿಸಲಾಗಿದೆ. ಜಿಯೋ ಫ್ರೀಡಮ್ ಯೋಜನೆಗಳ ಅಡಿಯಲ್ಲಿ ಐದು ಹೊಸ 'ದೈನಂದಿನ ಅನಿಯಮಿತ' ಪ್ರಿಪೇಯ್ಡ್ ಮೊಬಿಲಿಟಿ ಕೊಡುಗೆಗಳು ಡಿಜಿಟಲ್ ಜೀವನಕ್ಕೆ ಹೆಚ್ಚಿನ ಆಯ್ಕೆಗಳನ್ನು ತರುತ್ತವೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ 28 ದಿನಗಳಿಗೆ ಪ್ಲಾನ್ ನ ಮಾನ್ಯತೆ ನೀಡಲಾಗುತ್ತಿತ್ತು. ಈಗ ಅದನ್ನು 30 ದಿನಕ್ಕೆ ಹೆಚ್ಚಿಸಲಾಗಿದೆ. ಇನ್ನು ದಿನಕ್ಕೆ ಇಂತಿಷ್ಟು ಡೇಟಾ ಅಂತಾ ಮಿತಿ ಹೇರಲಾಗಿತ್ತು. ಇದೀಗ ಈ ಮಿತಿಯನ್ನು ತೆಗೆದುಹಾಕಲಾಗಿದೆ. 

ಈ ಯೋಜನೆಗಳು ಜಿಯೋಟಿವಿ, ಜಿಯೋ ಸಿನೆಮಾ, ಜಿಯೋನ್ಯೂಸ್ ಮತ್ತು ಇತರವುಗಳನ್ನು ಒಳಗೊಂಡಂತೆ ಜಿಯೋ ಮಾಹಿತಿ ಮತ್ತು ಯುಟಿಲಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಕಾಮೆಂಟ್‌ಗಳಿಗಾಗಿ ರಿಲಯನ್ಸ್ ಜಿಯೋಗೆ ಕಳುಹಿಸಿದ ಇಮೇಲ್ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. 

ಜಿಯೋ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ, 247 ರೂ.ಗಳ ಬೆಲೆಯ ಯೋಜನೆಯು ಯಾವುದೇ ದೈನಂದಿನ ಮಿತಿಗಳಿಲ್ಲದೆ 30 ದಿನಗಳ ಮಾನ್ಯತೆ ಮತ್ತು 25 ಜಿಬಿ ಡೇಟಾವನ್ನು ಹೊಂದಿದೆ. ಇತರ ಯೋಜನೆಗಳ ಬೆಲೆ 447 ರೂ. (60 ದಿನಗಳ ಸಿಂಧುತ್ವ, 50 ಜಿಬಿ ಡೇಟಾ), 597 ರೂ. (90 ದಿನಗಳ ಸಿಂಧುತ್ವ ಮತ್ತು 75 ಜಿಬಿ ಡೇಟಾ) ಮತ್ತು 2,397 ರೂ. (365 ದಿನಗಳ ಮಾನ್ಯತೆ ಮತ್ತು 365 ಜಿಬಿ ಡೇಟಾ).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.