ವಾಣಿಜ್ಯ

ಮೇ ತಿಂಗಳಲ್ಲಿ ಜಿಎಸ್ ಟಿ ಆದಾಯ ಶೇ.65 ರಷ್ಟು 1.02 ಲಕ್ಷ ಕೋಟಿಗೆ ಏರಿಕೆ

ಮೇ ತಿಂಗಳ ಜಿಎಸ್ ಟಿ ಸಂಗ್ರಹದಲ್ಲಿ ಶೇ.65 ರಷ್ಟು ಏರಿಕೆಯಾಗಿದ್ದು, 1.02 ಲಕ್ಷ ಕೋಟಿಯಷ್ಟು ಸಂಗ್ರಹವಾಗಿದೆ ಸತತ 8 ತಿಂಗಳಲ್ಲಿ ಸಂಗ್ರಹ ಏರಿಕೆಯಾಗಿದ್ದು, 1.02 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಮೇ ತಿಂಗಳಲ್ಲಿ ಜಿಎಸ್ ಟಿ ಆದಾಯ ಶೇ.65 ರಷ್ಟು 1.02 ಲಕ್ಷ ಕೋಟಿಗೆ ಏರಿಕೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮೇ ತಿಂಗಳ ಜಿಎಸ್ ಟಿ ಸಂಗ್ರಹದಲ್ಲಿ ಶೇ.65 ರಷ್ಟು ಏರಿಕೆಯಾಗಿದ್ದು, 1.02 ಲಕ್ಷ ಕೋಟಿಯಷ್ಟು ಸಂಗ್ರಹವಾಗಿದೆ ಸತತ 8 ತಿಂಗಳಲ್ಲಿ ಸಂಗ್ರಹ ಏರಿಕೆಯಾಗಿದ್ದು, 1.02 ಲಕ್ಷ ಕೋಟಿಗೆ ಏರಿಕೆಯಾಗಿದೆ. 

2020 ರ ಮೇ ತಿಂಗಳಲ್ಲಿ ಸಂಗ್ರಹವಾಗಿದ್ದ 62,009 ಕೋಟಿ ರೂಪಾಯಿಗಳ ಜಿಎಸ್ ಟಿ ಸಂಗ್ರಹದ ಮೊತ್ತಕ್ಕಿಂತಲೂ ಶೇ.65 ರಷ್ಟು ಹೆಚ್ಚಾಗಿದೆ. ರಾಷ್ಟ್ರ ವ್ಯಾಪಿ ಲಾಕ್ ಡೌನ್ ಇದ್ದ ಕಾರಣದಿಂದಾಗಿ ಕಳೆದ ವರ್ಷ ಜಿಎಸ್ ಟಿ ಸಂಗ್ರಹಕ್ಕೆ ಹೊಡೆತ ಬಿದ್ದಿತ್ತು. 

ಆದರೆ 2021 ರ ಮೇ ತಿಂಗಳಲ್ಲಿ ಸಂಗ್ರಹವಾಗಿರುವ ಜಿಎಸ್ ಟಿ ಮೊತ್ತ ಏಪ್ರಿಲ್ ತಿಂಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ. ಏಪ್ರಿಲ್ ತಿಂಗಳಲ್ಲಿ 1.41 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು. 

ಸಿಜಿಎಸ್ ಟಿ- 17,592 ಕೋಟಿ ರೂಪಾಯಿ, ಎಸ್ ಜಿಎಸ್ ಟಿ 22,653 ಕೋಟಿ ರೂಪಾಯಿ, ಐಜಿಎಸ್ ಟಿ 53,199 ಕೋಟಿ ರೂಪಾಯಿ (ಸರಕುಗಳ ಆಮದು ಮೇಲೆ 26,002 ಕೋಟಿ ರೂಪಾಯಿ) ಸೆಸ್  9,265 ಕೋಟಿ ರೂಪಾಯಿ (ಆಮದು ಸರಕುಗಳ ಮೇಲಿನ 868 ಕೋಟಿ ರೂಪಾಯಿ ಸೇರಿ) ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.