ರಿಸರ್ವ್ ಬ್ಯಾಂಕ್ ನಿಂದ ಪೇಟಿಎಂ ಗೆ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ: ಸಿಇಒ ಸಂತಸ
ಪೇಟಿಎಂಗೆ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ದೊರೆತಿರುವುದರಿಂದ ಹೊಸ ಹೊಸ ಬುಸಿನೆಸ್ ಅವಕಾಶಗಳು ಪೇಟಿಎಂ ಅನ್ನು ಹುಡುಕಿಕೊಂಡು ಬರಲಿವೆ ಎಂದು ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.

ನವದೆಹಲಿ: ಆನ್ಲೈನ್ ಪೇಮೆಂಟ್ ತಾಣವಾದ ಪೇಟಿಎಂ.ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ನೀಡಿದೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪೇಟಿಎಂ ಸಿಇಒ ಸತೀಶ್ ಕುಮಾರ್ ಗುಪ್ತಾ, ಇದರಿಂದಾಗಿ ಜನರಿಗೆ ಉಪಯುಕ್ತವಾಗಿರುವ ಹಲವು ಸವಲತ್ತುಗಳನ್ನು ನೀಡಲು ಪ್ರೇರಣೆ ದೊರೆತಿರುವುದಾಗಿ ಹೇಳಿದ್ದಾರೆ.
ಪೇಟಿಎಂಗೆ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ದೊರೆತಿರುವುದರಿಂದ ಹೊಸ ಹೊಸ ಬುಸಿನೆಸ್ ಅವಕಾಶಗಳು ಪೇಟಿಎಂ ಅನ್ನು ಹುಡುಕಿಕೊಂಡು ಬರಲಿವೆ ಎಂದು ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಸರ್ಕಾರಿ ಯೋಜನೆಗಳಲ್ಲಿಯೂ ಇನ್ನುಮುಂದೆ ಪೇಟಿಎಂ ಪಾಲ್ಗೊಳ್ಳಬಹುದಾಗಿದೆ.
ಅಲ್ಲದೆ ಇನ್ನುಮುಂದೆ 33.3 ಕೋಟಿ ಪೇಟಿಎಂ ವ್ಯಾಲೆಟ್ ಗಳಿಗೆ ಆರ್ ಅಬಿ ಐ ನೆರವು ಸಿಗಲಿದೆ. 87,000 ಆನ್ ಲೈನ್ ಖರೀದಿ ತಾಣಗಳಲ್ಲಿ ಹಾಗೂ 2.1 ಕೋಟಿ ಆಫ್ ಲೈನ್ ಖರೀದಿ ತಾಣಗಳ ಜೊತೆ ಪೇಟಿಎಂ ಗ್ರಾಹಕರು ವ್ಯವಹರಿಸಲು ಸುಲಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


