EPFO ನಿಂದ ಆಧಾರ್ ಆಧಾರಿತ ಇ-ನಾಮಿನೇಷನ್ (ಇ-ನಾಮನಿರ್ದೇಶನ) ಪ್ರಾರಂಭ
ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರಿಗೆ ಅನುಕೂಲವಾಗುವಂತೆ, ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಮತ್ತೊಂದು ಇ-ಉಪಕ್ರಮವನ್ನು ಪ್ರಾರಂಭಿಸಿದೆ, ಅದುವೇ ಆಧಾರ್ ಆಧಾರಿತ ಇ-ನಾಮನಿರ್ದೇಶನ.

ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ, ಪಿಎಫ್ ಖಾತೆದಾರರ ಅವಲಂಬಿತರು ಆಯಾ ಇಪಿಎಫ್ ಖಾತೆಗಳಲ್ಲಿ ನಾಮನಿರ್ದೇಶನವನ್ನು ಸಲ್ಲಿಸದ ಕಾರಣ ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾದ ಅನೇಕ ಪ್ರಕರಣಗಳನ್ನು ಗಮನಿಸಲಾಗಿದೆ.
ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರಿಗೆ ಅನುಕೂಲವಾಗುವಂತೆ, ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಮತ್ತೊಂದು ಇ-ಉಪಕ್ರಮವನ್ನು ಪ್ರಾರಂಭಿಸಿದೆ, ಅದುವೇ ಆಧಾರ್ ಆಧಾರಿತ ಇ-ನಾಮನಿರ್ದೇಶನ.
ನಾಮನಿರ್ದೇಶನದ ಭೌತಿಕ ಫೈಲಿಂಗ್ ಅನ್ನು 'ಫಾರ್ಮ್ 2 (ಪರಿಷ್ಕೃತ)' ಸಲ್ಲಿಕೆ ಮೂಲಕ ಮಾಡಲಾಗುತ್ತದೆ, ಈಗ ಇ-ನಾಮನಿರ್ದೇಶನ ಸೌಲಭ್ಯವನ್ನು ಪ್ರಾರಂಭಿಸುವುದರೊಂದಿಗೆ, ಸದಸ್ಯರು ಸ್ವತಃ ತಮ್ಮ ನಾಮನಿರ್ದೇಶನವನ್ನು ಮನೆಯಲ್ಲೇ ಕುಳಿತು ಸದಸ್ಯರ ಪೋರ್ಟಲ್‌ನಲ್ಲಿ ಲಭ್ಯವಿರುವ ಈ ಇ-ನಾಮನಿರ್ದೇಶನ ಸೌಲಭ್ಯವನ್ನು ಬಳಸಿಕೊಂಡು ತಮ್ಮ ನಾಮನಿರ್ದೇಶನಗಳನ್ನು ಕೆಲವೇ ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ.
ಕಾರ್ಮಿಕರ ಭವಿಷ್ಯ ನಿಧಿ ಸದಸ್ಯರ ಮೊಬೈಲ್ ಸಂಖ್ಯೆಯು ಯುಎಎನ್‌ನೊಂದಿಗೆ ಲಿಂಕ್ ಆಗಿದ್ದರೆ ಮತ್ತು ಆಧಾರ್ ಪರಿಶೀಲನೆಯೂ ಪೂರ್ಣಗೊಂಡಿದ್ದರೆ ಅವರು ಈ ಸೌಲಭ್ಯವನ್ನು ಪಡೆಯಬಹುದು.
ನೋಂದಣಿ ಪ್ರಕ್ರಿಯೆಯು ಬಲು ಸರಳವಿರುವುದರಿಂದ, ಎಲ್ಲಾ ಸದಸ್ಯರು ತಮ್ಮ ಇ-ನಾಮನಿರ್ದೇಶನವನ್ನು ಆದಷ್ಟು ಬೇಗ ಸಲ್ಲಿಸುವಂತೆ ಸೂಚಿಸಲಾಗಿದೆ. ವ್ಯವಸ್ಥೆಯಲ್ಲಿ ಲಭ್ಯವಿರುವ ಇ-ನಾಮನಿರ್ದೇಶನವು ಸದಸ್ಯರು/ಫಲಾನುಭವಿಗಳಿಗೆ ಆನ್‌ಲೈನ್‌ನಲ್ಲಿ ಸುಲಭವಾಗಿ ಪಿಂಚಣಿ ದಾವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ ಮತ್ತು ಸದಸ್ಯರ ಮರಣದ ಸಂದರ್ಭದಲ್ಲಿ, ನಾಮಿನಿಯು ತನ್ನ ಆಧಾರ್ ಲಿಂಕ್ ಮಾಡಿದ ಮೊಬೈಲ್‌ನಲ್ಲಿ ಸ್ವೀಕರಿಸಿದ OTP ಆಧಾರದ ಮೇಲೆ ಆನ್‌ಲೈನ್‌ನಲ್ಲಿ ಕ್ಲೈಮ್ ಅನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಆನ್‌ಲೈನ್ ನಾಮನಿರ್ದೇಶನವನ್ನು ಮಾಡಿದ ನಂತರ ಉದ್ಯೋಗದಾತ ಅಥವಾ ಮಾಜಿ ಉದ್ಯೋಗದಾತರು ಯಾವುದೇ ಭೌತಿಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಎಲ್ಲಾ ಕಾರ್ಮಿಕರ ಭವಿಷ್ಯ ನಿಧಿಸದಸ್ಯರು ಏಕೀಕೃತ ಪೋರ್ಟಲ್‌ನ ಸದಸ್ಯ ಇಂಟರ್‌ಫೇಸ್‌ನಲ್ಲಿ ತಮ್ಮ ಇ-ನಾಮನಿರ್ದೇಶನವನ್ನು ತಕ್ಷಣವೇ ನೋಂದಾಯಿಸಲು ಸೂಚಿಸಲಾಗಿದೆ. ಇದಲ್ಲದೇ, ಎಲ್ಲಾ ಕಾರ್ಮಿಕರ ಭವಿಷ್ಯ ನಿಧಿಸದಸ್ಯರಿಗೆ ಆಧಾರ್ ಮತ್ತು ಬ್ಯಾಂಕ್ ಖಾತೆಯಂತಹ ಪ್ರಮುಖ ಕೆ ವೈ ಸಿ (KYC) ಅನ್ನು ತಮ್ಮ ಯೂ ಎ ಎನ್ (UAN)ನೊಂದಿಗೆ ಲಿಂಕ್ ಮಾಡಲು ಸಲಹೆ ನೀಡಲಾಗುತ್ತದೆ ಇದರಿಂದ ಅವರು ಈಪಿನಎಫ್‌ಓ ನ ಆನ್‌ಲೈನ್ ಸೇವೆಗಳನ್ನು ಪಡೆಯಬಹುದು. ಉದ್ಯೋಗದಾತ ಅಥವಾ ಇಪಿಎಫ್ ಕಚೇರಿಯ ಮುಂದೆ ಭೌತಿಕವಾಗಿ ಕ್ಲೈಮ್ ಸಲ್ಲಿಸುವುದನ್ನು ತಪ್ಪಿಸಿ, ಬದಲಿಗೆ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಒದಗಿಸಿದ ವಿವಿಧ ಆನ್‌ಲೈನ್ ಸೇವೆಗಳನ್ನು ಬಳಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


