ಸಗಟು ಹಣದುಬ್ಬರ ಸತತ ಎರಡನೇ ತಿಂಗಳು ಇಳಿಕೆ!
ಉತ್ಪಾದಿತ ಸರಕುಗಳು, ಕಚ್ಚಾ ತೈಲ ಬೆಲೆ ಏರಿಕೆಯ ನಡುವೆಯೂ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದರ ಪರಿಣಾಮ ಸಗಟು ಹಣದುಬ್ಬರ ಸತತ 2 ನೇ ತಿಂಗಳು ಕುಸಿತ ಕಂಡಿದೆ.

ನವದೆಹಲಿ: ಉತ್ಪಾದಿತ ಸರಕುಗಳು, ಕಚ್ಚಾ ತೈಲ ಬೆಲೆ ಏರಿಕೆಯ ನಡುವೆಯೂ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದರ ಪರಿಣಾಮ ಸಗಟು ಹಣದುಬ್ಬರ ಸತತ 2 ನೇ ತಿಂಗಳು ಕುಸಿತ ಕಂಡಿದೆ.
ಜುಲೈ ತಿಂಗಳಲ್ಲಿ ಹಣದುಬ್ಬರ ಶೇ.11.16 ಕ್ಕೆ ಕುಸಿದಿದ್ದರೂ ಸತತ ಮೂರನೇ ತಿಂಗಳೂ ಹಣದುಬ್ಬರ, ಕಳೆದ ವರ್ಷದ ಕಡಿಮೆ ಬೇಸ್ ನ ಪರಿಣಾಮವಾಗಿ ಎರಡು ಅಂಕಿಗಳಷ್ಟಿದೆ. 2020 ರ ಜುಲೈ ನಲ್ಲಿ ಡಬ್ಲ್ಯುಪಿಐ ಹಣದುಬ್ಬರ (-)0.25 ರಷ್ಟಿತ್ತು.
"ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ, 2021 ರ ಜುಲೈ ನಲ್ಲಿ ಹಣದುಬ್ಬರ ದರ ಏರಿಕೆಯಾಗಿರುವುದಕ್ಕೆ ಕಡಿಮೆ ಬೇಸ್ ಪರಿಣಾಮ ಹಾಗೂ ಕಚ್ಚಾ ತೈಲ, ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲ, ಖನಿಜ ತೈಲ, ಆಹಾರ ಉತ್ಪನ್ನಗಳು, ಜವಳಿ; ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳ ಬೆಲೆ ಏರಿಕೆ ಕಾರಣವಾಗಿದೆ" ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ. ಈರುಳ್ಳಿ ಬೆಲೆ ಏರಿಕೆಯ ನಡುವೆಯೂ ಆಹಾರ ಪದಾರ್ಥಗಳ ಹಣದುಬ್ಬರ ಮೂರನೇ ತಿಂಗಳೂ ಇಳಿಕೆಯಾಗಿದ್ದು, ಜೂನ್ ನಲ್ಲಿದ್ದ 3.09 ರಿಂಡ ಜುಲೈ ನಲ್ಲಿ ಶೂನ್ಯಕ್ಕೆ ತಲುಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


