ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಶೇ.10.4ಕ್ಕೆ ಕಡಿತಗೊಳಿಸಿದ ಎಸ್ ಬಿಐ!
ಸತತ ಮೂರನೇ ದಿನವೂ ಜಾಗತಿಕ ಕೊರೋನಾ ಸೋಂಕಿತ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಅನೇಕ ರಾಜ್ಯಗಳು ನಿರ್ಬಂಧ ವಿಧಿಸಿರುವಂತೆಯೇ, ಪ್ರಸಕ್ತ ವರ್ಷದ ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣದ ಮುನ್ಸೂಚನೆಯನ್ನು ಎಸ್ ಬಿಐ ಈ ಹಿಂದೆ ಅಂದಾಜಿಸಿದಂತೆ ಶೇ. 11 ರಿಂದ ಶೇ. 10. 4 ಕ್ಕೆ ಇಳಿಕೆ ಮಾಡಿದೆ.

ಮುಂಬೈ: ಸತತ ಮೂರನೇ ದಿನವೂ ಜಾಗತಿಕ ಕೊರೋನಾ ಸೋಂಕಿತ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಅನೇಕ ರಾಜ್ಯಗಳು ನಿರ್ಬಂಧ ವಿಧಿಸಿರುವಂತೆಯೇ, ಪ್ರಸಕ್ತ ವರ್ಷದ ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣದ ಮುನ್ಸೂಚನೆಯನ್ನು ಎಸ್ ಬಿಐ ಈ ಹಿಂದೆ ಅಂದಾಜಿಸಿದಂತೆ ಶೇ. 11 ರಿಂದ ಶೇ. 10. 4 ಕ್ಕೆ ಇಳಿಕೆ ಮಾಡಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸುಮಾರು 3.34 ಲಕ್ಷ ಹೊಸದಾಗಿ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ.
ಬ್ಯಾಂಕಿನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಾ ಕಾಂತಿ ಘೋಷ್ ಬರೆದಿರುವ ವರದಿಯು, ತ್ವರಿತಗತಿಯ ಲಸಿಕೆ ಸಂಪೂರ್ಣ ಲಾಕ್ ಡೌನ್ ಗಿಂತಲೂ ಆರ್ಥಿಕತೆ ಮೇಲೆ ಅಗ್ಗವಾಗಲಿದೆ ಎಂದು ಸಲಹೆ ನೀಡಿದೆ.
ಈಗ ರಾಜ್ಯಗಳು ಮೇ 1 ರಿಂದ ನೇರವಾಗಿ ಉತ್ಪಾದಕರಿಂದ ಲಸಿಕೆಗಳನ್ನು ಖರೀದಿಸಬಹುದಾಗಿದೆ. ನಮ್ಮ ಅಂದಾಜಿನಂತೆ 13 ದೊಡ್ಡ ರಾಜ್ಯಗಳ ಲಸಿಕೆ ವೆಚ್ಚವು ಅವರ ಜಿಡಿಪಿ ಸಂಗ್ರಹದ ಕೇವಲ ಶೇ. 0.1 ರಷ್ಟಿದೆ. ಲಾಕ್ ಡೌನ್ ನಿಂದ ಈಗಾಗಲೇ ಶೇ.0.7 ರಷ್ಟಿರುವ ಜಿಡಿಪಿಯಲ್ಲಿನ ಆರ್ಥಿಕ ನಷ್ಟಕ್ಕಿಂತ ಇದು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಘೋಷ್ ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಭಾಗಶ: ಸ್ಥಳೀಯ ಮತ್ತು ವಿಕೇಂಡ್ ಲಾಕ್ ಡೌನ್ ಗಳಿದ್ದು, ಆರ್ಥಿಕ ಬೆಳವಣಿಗೆ ದರದ ಮುನ್ಸೂಚನೆಯನ್ನು ಶೇ.10.4ಕ್ಕೆ ಕಡಿತಗೊಳಿಸಿ ಪರಿಷ್ಕರಿಸಿರುವುದಾಗಿ ಘೋಷ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


