ಷೇರು ಮಾರುಕಟ್ಟೆ ಮೇಲೆ ಕೊರೋನಾ ಕರಿಛಾಯೆ: ಸೆನ್ಸೆಕ್ಸ್ 1,400, ನಿಫ್ಟಿ 14,400 ಅಂಕ ಕುಸಿತ
ದೇಶದಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗುತ್ತಿದ್ದಂತೆ ವಾಣಿಜ್ಯ ಚಟುವಟಿಕೆಗಳ ಮೇಲೆ ಮತ್ತಷ್ಟು ಹೊಡೆತ ಬೀಳುತ್ತಿದೆ.

ಮುಂಬೈ: ದೇಶದಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗುತ್ತಿದ್ದಂತೆ ವಾಣಿಜ್ಯ ಚಟುವಟಿಕೆಗಳ ಮೇಲೆ ಮತ್ತಷ್ಟು ಹೊಡೆತ ಬೀಳುತ್ತಿದೆ.
ಸೋಮವಾರ ಬೆಳಗ್ಗೆ ವಹಿವಾಟು ಆರಂಭಕ್ಕೆ ಸೆನ್ಸೆಕ್ಸ್ 1,400 ಅಂಕಗಳಷ್ಟು ಇಳಿಕೆಯಾಗಿದ್ದು ಹೆಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಗಳು ಇಂದು ವಹಿವಾಟು ಆರಂಭಕ್ಕೆ ಭಾರೀ ನಷ್ಟ ಅನುಭವಿಸಿದವು.
ಜಾಗತಿಕ ಮಾರುಕಟ್ಟೆ ಕಳೆದ ಕೆಲವು ದಿನಗಳಿಂದ ಋಣಾತ್ಮಕವಾಗಿ ವಹಿವಾಟು ನಡೆಯುತ್ತಿದ್ದು ಕೋವಿಡ್-19 ಹೆಚ್ಚಾಗುತ್ತಿದ್ದಂತೆ ಪರಿಣಾಮ ಬೀರುತ್ತಿದೆ. 30 ಷೇರುಗಳ ಬಿಎಸ್ ಇ ಸೂಚ್ಯಂಕ ಇಂದು ಬೆಳಗ್ಗೆ 1,427 ಅಂಕಗಳಲ್ಲಿ ಶೇಕಡಾ 2.88ರಷ್ಟು ಕುಸಿತ ಕಂಡುಬಂದು 48 ಸಾವಿರದ 164.32 ರಲ್ಲಿ ವಹಿವಾಟು ನಡೆಸುತ್ತಿತ್ತು.
ನಿಫ್ಟಿ ಸಹ ಇಂದು 431.90 ಅಂಕಗಳಷ್ಟು ಕುಸಿದು 14 ಸಾವಿರದ 403ರಲ್ಲಿ ವಹಿವಾಟು ನಡೆಸುತ್ತಿತ್ತು. ಇಂದಿನ ವಹಿವಾಟಿನಲ್ಲಿ ಇಂಡಸ್ ಇಂಡ್ ಬ್ಯಾಂಕ್ ಬಹಳ ನಷ್ಟ ಅನುಭವಿಸಿದೆ. ಶೇಕಡಾ 8ರಷ್ಟು ನಷ್ಟ ಅನುಭವಿಸಿದ್ದು ನಂತರ ಎಸ್ ಬಿಐ, ಬಜಾಜ್ ಫೈನಾನ್ಸ್, ಬಜಾಜ್ ಆಟೋ, ಟೈಟಾನ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್ಸರ್ವ್ ಮತ್ತು ಮಾರುತಿ ಕಂಪೆನಿಗಳಿವೆ.
ಇಂದಿನ ವಹಿವಾಟಿನಲ್ಲಿ ಇನ್ಫೋಸಿಸ್ ಮಾತ್ರ ಸ್ವಲ್ಪ ಲಾಭ ಮಾಡಿಕೊಂಡಿದೆ. ಈ ಹಿಂದೆ, ಸೆನ್ಸೆಕ್ಸ್ 154.89 ಪಾಯಿಂಟ್ ಅಥವಾ 0.31 ರಷ್ಟು ಕಡಿಮೆಯಾಗಿ 49,591.32 ಕ್ಕೆ ತಲುಪಿತ್ತು ಮತ್ತು ನಿಫ್ಟಿ 38.95 ಪಾಯಿಂಟ್ ಅಥವಾ 0.26 ರಷ್ಟು ಕುಸಿದು 14,834.85 ಕ್ಕೆ ತಲುಪಿತ್ತು.
ಕೊರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ತೀವ್ರವಾಗಿದೆ, ಆರ್ಥಿಕತೆ ಮತ್ತು ಮಾರುಕಟ್ಟೆಗಳ ಮೇಲೆ ಅದರ ಪ್ರಭಾವದ ಬಗ್ಗೆ ಆಳವಾದ ಅನಿಶ್ಚಿತತೆಯಿದೆ ಎಂದು ಮುಖ್ಯ ಹೂಡಿಕೆ ತಾಂತ್ರಿಕ ವಿ ಕೆ ವಿಜಯಕುಮಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಇನ್ನಷ್ಟು ತೀವ್ರವಾಗಿದೆ. ಇದು ವಾಣಿಜ್ಯ ನಗರಿ ಮುಂಬೈ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದ್ದು ಶೇಕಡಾ 11ರಷ್ಟು ಜಿಡಿಪಿ ಮತ್ತು ಶೇಕಡಾ 30ಕ್ಕೂ ಅಧಿಕ ಒಟ್ಟಾರೆ ಆದಾಯದ ಅಂದಾಜಿನ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


