ಪ್ರಸಕ್ತ ವರ್ಷ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇ.13ರಷ್ಟು ಏರಿಕೆ
ಪ್ರಸಕ್ತ ವರ್ಷದಲ್ಲಿ ಈವರೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ಶೇ 13 ರಷ್ಟು ಏರಿಕೆಯಾಗಿದ್ದು, ಇದು 35.73 ಶತಕೋಟಿ ಡಾಲರ್ ಗೆ ತಲುಪಿದೆ.

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಈವರೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ಶೇ.13 ರಷ್ಟು ಏರಿಕೆಯಾಗಿದ್ದು, ಇದು 35.73 ಶತಕೋಟಿ ಡಾಲರ್ ಗೆ ತಲುಪಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಂತೆ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ಮತ್ತು ಆಗಸ್ಟ್ ನಡುವಿನ ಅವಧಿಯಲ್ಲಿ ಎಫ್ ಡಿಐ 35. 73 ಶತಕೋಟಿ ಕೋಟಿ ಡಾಲರ್ ನಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳ ಇದುವರೆಗಿನ ಗರಿಷ್ಠ ಮೊತ್ತ ಇದಾಗಿದೆ.
2019-2020ರ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ಎಫ್ಡಿಐ ಹರಿವು 31. 60 ಕೋಟಿ ಡಾಲರ್ ನಷ್ಟಿತ್ತು. ಅಂದರೆ ಈ ವರ್ಷ ಇದೇ ಅವಧಿಯಲ್ಲಿ ಎಫ್ ಡಿಐ ಶೇ 13ರಷ್ಟು ಏರಿಕೆ ಕಂಡಿದೆ. ಮಾಹಿತಿಯಂತೆ, 2020-21ರ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ಎಫ್ ಡಿಐ ಇಕ್ವಿಟಿ ಒಳಹರಿವು ಶೇ 16 ರಷ್ಟು ಏರಿಕೆಯಾಗಿದ್ದು, 27 .10 ಶತಕೋಟಿ ಡಾಲರ್ ಗಳಷ್ಟಿದೆ.
ಇದು ಹಣಕಾಸಿನ ವರ್ಷದ ಮೊದಲ ಐದು ತಿಂಗಳಲ್ಲಿ ಅತಿ ಹೆಚ್ಚು ಮೊತ್ತದ್ದಾಗಿದ್ದು, 2019-2020ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಎಫ್ ಡಿಐ ಇಕ್ವಿಟಿ ಒಳಹರಿವು 23. 35 ಶತಕೋಟಿ ಡಾಲರ್ ನಷ್ಟಿತ್ತು. ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಎಫ್ ಡಿಐ ಪ್ರಮುಖ ಪಾತ್ರ ವಹಿಸುವಯದರುಣದ ಎಫ್ ಡಿಐ ಆಕರ್ಷಿಸಲು ಅನುಕೂಲವಾಗುವಂತೆ ಅನೇಕ ದೃಢ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ನೀತಿ ಅಡೆತಡೆಗಳನ್ನು ತೆಗೆದುಹಾಕಲಾಗಿದ್ದು, ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


