ವಾಣಿಜ್ಯ

48 ದಿನಗಳ ಬಳಿಕ ಪೆಟ್ರೋಲ್- ಡೀಸೆಲ್ ಬೆಲೆ ಮತ್ತೆ ಹೆಚ್ಚಳ

ದೇಶದಲ್ಲಿ 48 ದಿನಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಲೀಟರ್ ಗೆ ತಲಾ ಮೂರು ಪೈಸೆ ಏರಿಕೆಯಾಗಿದೆ.

48 ದಿನಗಳ ಬಳಿಕ ಪೆಟ್ರೋಲ್- ಡೀಸೆಲ್ ಬೆಲೆ ಮತ್ತೆ ಹೆಚ್ಚಳ
ಸಂಗ್ರಹ ಚಿತ್ರ
Published On :

ನವದೆಹಲಿ: ದೇಶದಲ್ಲಿ 48 ದಿನಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಲೀಟರ್ ಗೆ ತಲಾ ಮೂರು ಪೈಸೆ ಏರಿಕೆಯಾಗಿದೆ.

ಸಾರ್ವಜನಿಕ ವಲಯದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಯಾದ ಇಂಡಿಯನ್ ಆಯಿಲ್ ಪ್ರಕಾರ, ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ಬೆಲೆಯನ್ನು 22 ರಿಂದ 25 ಪೈಸೆ ಮತ್ತು ಪೆಟ್ರೋಲ್ ಅನ್ನು ಪ್ರತಿ ಲೀಟರ್ ಗೆ 17 ರಿಂದ 20 ಪೈಸೆ ಹೆಚ್ಚಿಸಲಾಗಿದೆ.

ಕಳೆದ ವಾರ ಒಪೆಕ್ ಸದಸ್ಯರು ತೈಲ ನಿಕ್ಷೇಪ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಅಮೆರಿಕ ಒಪ್ಪಿಕೊಂಡ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ದೇಶೀಯ ಮಾರುಕಟ್ಟೆಯಲ್ಲಿ, ಡೀಸೆಲ್ ಬೆಲೆಯಲ್ಲಿ ಕೊನೆಯ ಪರಿಷ್ಕರಣೆ ಅಕ್ಟೋಬರ್ 2 ರಂದು ಕಂಡುಬಂದಿತ್ತು, ಪೆಟ್ರೋಲ್ ಬೆಲೆ ಕಳೆದ 58 ದಿನಗಳಿಂದ ಸ್ಥಿರವಾಗಿತ್ತು.ಪೆಟ್ರೋಲ್ ಬೆಲೆಯನ್ನು ಕೊನೆಯದಾಗಿ ಸೆಪ್ಟೆಂಬರ್ 22 ರಂದು ಪ್ರತಿ ಲೀಟರ್‌ಗೆ 7 ರಿಂದ 8 ಪೈಸೆ ಇಳಿಕೆಯಾಗಿತ್ತು. 

ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 81.23 ರೂ.ಗಳಷ್ಟಿದ್ದರೆ, ಡೀಸೆಲ್ ಲೀಟರ್ ಗೆ 70.68 ರೂ.ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 87.92 ರೂ ಮತ್ತು ಡೀಸೆಲ್ ಲೀಟರ್‌ಗೆ 77.11 ರೂ., ಕೋಲ್ಕತ್ತಾದ ಪೆಟ್ರೋಲ್ ಪ್ರತಿ ಲೀಟರ್‌ಗೆ 82.79 ರೂ ಮತ್ತು ಡೀಸೆಲ್ ಲೀಟರ್‌ಗೆ 74.24 ರೂ.ಗೆ ಏರಿಕೆಯಾಗಿದೆ ಚೆನ್ನೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 84.21 ರೂ ಮತ್ತು ಡೀಸೆಲ್ ಲೀಟರ್ ಗೆ 76.17 ರೂ ಇದೆ ಎಂದು ತೈಲ ಕಂಪನಿಗಳು ಹೇಳಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.