50 ಸಾವಿರ ಕಾಲೋಚಿತ ಉದ್ಯೋಗ ಸೃಷ್ಟಿ: ಅಮೆಜಾನ್ ಇಂಡಿಯಾ
ತನ್ನ ಸೇವೆಗಳನ್ನು ಅವಲಂಬಿಸಿರುವ ಜನರ ಬೇಡಿಕೆ ಪೂರೈಸುವ ಸಲುವಾಗಿ ವಿಶೇಷವಾಗಿ ಸಾರ್ವಜನಿಕ ಸೇವೆಯಿಂದ ಹೊರಗುಳಿದಿರುವವರಿಗಾಗಿ ಸುಮಾರು 50 ಸಾವಿರ ಕಾಲೋಚಿತ ಉದ್ಯೋಗವಕಾಶಗಳನ್ನು ಸೃಷ್ಟಿಸುವುದಾಗಿ ಅಮೆಜಾನ್ ಇಂಡಿಯಾ ಶುಕ್ರವಾರ ಹೇಳಿದೆ.

ಬೆಂಗಳೂರು: ತನ್ನ ಸೇವೆಗಳನ್ನು ಅವಲಂಬಿಸಿರುವ ಜನರ ಬೇಡಿಕೆ ಪೂರೈಸುವ ಸಲುವಾಗಿ ವಿಶೇಷವಾಗಿ ಸಾರ್ವಜನಿಕ ಸೇವೆಯಿಂದ ಹೊರಗುಳಿದಿರುವವರಿಗಾಗಿ ಸುಮಾರು 50 ಸಾವಿರ ಕಾಲೋಚಿತ ಉದ್ಯೋಗವಕಾಶಗಳನ್ನು ಸೃಷ್ಠಿಸುವುದಾಗಿ ಅಮೆಜಾನ್ ಇಂಡಿಯಾ ಶುಕ್ರವಾರ ಹೇಳಿದೆ.
ಅಮೆಜಾನ್ ನಡಿ ಸ್ವತಂತ್ರ ಗುತ್ತಿಗೆದಾರರಾಗಿ ಪಾರ್ಟ್ ಟೈಮ್ ಕೆಲಸ ಸೇರಿದಂತೆ ಡೆಲಿವರಿ ನೆಟ್ ವರ್ಕ್ ಹಾಗೂ ಅವರ ಅವಲಂಬಿತ ಕೇಂದ್ರಗಳಲ್ಲಿ ಇದು ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಲಿದೆ ಎಂದು ಹೇಳಿಕೆಯಲ್ಲಿ ಅಮೆಜಾನ್ ಇಂಡಿಯಾ ತಿಳಿಸಿದೆ.
ಈ ಉದ್ಯೋಗಿಗಳು ಇತರ ಸಾವಿರಾರು ಸಹವರ್ತಿಗಳನ್ನು ಸೇರಲಿದ್ದು, ಸರಕುಗಳನ್ನು ಪ್ಯಾಕ್ ಮಾಡುವ, ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ದಕ್ಷತೆಯಿಂದ ಮಾಡಲಿದ್ದಾರೆ ಎಂದು ಹೇಳಿದೆ.
ಸಣ್ಣ ವ್ಯವಹಾರ ಹಾಗೂ ಆರ್ಥಿಕತೆಯಲ್ಲಿ ಅಮೆಜಾನ್ ಮತ್ತು ಇ- ಕಾಮರ್ಸ್ ಹೇಗೆ ನಮ್ಮ ಗ್ರಾಹಕರಿಗಾಗಿ ಹೇಗೆ ವ್ಯವಹಾರ ಮಾಡಬಹುದು ಎಂಬುದನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಕಲಿತುಕೊಂಡಿರುವುದಾಗಿ ಅಮೆಜಾನ್ ಉಪಾಧ್ಯಕ್ಷ ಅಕಿಲ್ ಸಾಕ್ಸೆನಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


