ಮಾರುಕಟ್ಟೆ ವಹಿವಾಟು: ಕೈಗಾರಿಕಾ ಉತ್ಪಾದನೆಯಲ್ಲಿ ಶೇ.2ರಷ್ಟು ಹೆಚ್ಚಳ, ಚಿಲ್ಲರೆ ಹಣದುಬ್ಬರ ಶೇ.6.58ಕ್ಕೆ ಇಳಿಕೆ
ದೇಶದ ಉತ್ಪಾದನಾ ಕ್ಷೇತ್ರದ ಕಾರ್ಯಕ್ಷಮತೆಯ ಆಧಾರದಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯು ಜನವರಿಯಲ್ಲಿ ಶೇಕಡಾ 2 ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಗುರುವಾರ ಬಹಿರಂಗಪಡಿಸಿದೆ

ನವದೆಹಲಿ: ದೇಶದ ಉತ್ಪಾದನಾ ಕ್ಷೇತ್ರದ ಕಾರ್ಯಕ್ಷಮತೆಯ ಆಧಾರದಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯು ಜನವರಿಯಲ್ಲಿ ಶೇಕಡಾ 2 ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಗುರುವಾರ ಬಹಿರಂಗಪಡಿಸಿದೆ
ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) 2019 ರ ಜನವರಿಯಲ್ಲಿ ಶೇಕಡಾ 1.6 ರಷ್ಟು ಏರಿಕೆಯಾಗಿದೆ. ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿಯ (ಎನ್‌ಎಸ್‌ಒ) ಅಂಕಿಅಂಶಗಳ ಪ್ರಕಾರ, ಉತ್ಪಾದನಾ ವಲಯದ ಉತ್ಪಾದನೆಯು ಶೇಕಡಾ 1.5 ರಷ್ಟು ಏರಿಕೆಯಾಗಿದೆ.
.ವಿದ್ಯುತ್ ಉತ್ಪಾದನೆಯು ಶೇಕಡಾ 3.1 ರಷ್ಟು ಗಣಿಗಾರಿಕೆ ಕ್ಷೇತ್ರದ ಉತ್ಪಾದನೆಯು 2020 ರ ಜನವರಿಯಲ್ಲಿ 4.4 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ, ಇದು ಒಂದು ವರ್ಷದ ಹಿಂದೆ ಶೇಕಡಾ 3.8 ರಷ್ಟು ಬೆ:ಳವಣಿಗೆ ದಾಖಲಿಸಿತ್ತು.ಏಪ್ರಿಲ್ 2019 ರಿಂದ ಜನವರಿ 2020 ರ ಅವಧಿಯಲ್ಲಿ ಐಐಪಿ ಬೆಳವಣಿಗೆಯು ಶೇಕಡಾ 0.5 ಕ್ಕೆ ಇಳಿದಿದೆ,
ಚಿಲ್ಲರೆ ಹಣದುಬ್ಬರ ಇಳಿಕೆ
ಚಿಲ್ಲರೆ ಹಣದುಬ್ಬರವು ಹಿಂದಿನ ತಿಂಗಳಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಶೇಕಡಾ 6.58 ಕ್ಕೆ ಇಳಿದಿದೆ. ಮುಖ್ಯವಾಗಿ ಆಹಾರ ಬೆಲೆಗಳಲ್ಲಿನ ಇಳಿಕೆ ಇದಕ್ಕೆ ಕಾರಣವೆಂದು ಹೇಳಲಾಗಿದೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇಕಡಾ 7.59 ಮತ್ತು 2019 ರ ಫೆಬ್ರವರಿಯಲ್ಲಿ ಶೇಕಡಾ 2. 57 ರಷ್ಟಿತ್ತು.ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಸಿಪಿಐ ಅಂಕಿಅಂಶಗಳ ಪ್ರಕಾರ,ಫುಡ್ ಬಾಸ್ಕೆಟ್ ಹಣದುಬ್ಬರವು 2020 ರ ಫೆಬ್ರವರಿಯಲ್ಲಿ ಶೇಕಡಾ 10.81 ರಷ್ಟಿತ್ತು, ಹಿಂದಿನ ತಿಂಗಳಲ್ಲಿ ಇದು ಶೇಕಡಾ 13. 63 ಪ್ರಮಾಣದಲ್ಲಿತ್ತು. s
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


