ವಾಣಿಜ್ಯ

2019-20ರ ಆರ್ಥಿಕ ವರ್ಷಕ್ಕೆ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.8.5 ಕ್ಕೆ ಇಳಿಸಿದ ಇಪಿಎಫ್ಒ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಏಳು ವರ್ಷಗಳಲ್ಲಿ ಕಡಿಮೆ ಎನ್ನಲಾದ ಶೇ. 8. 5 ರಷ್ಟು ಪಾವತಿಸಲು ಇಪಿಎಫ್ ಒ ನಿರ್ಧರಿಸಿದೆ. 2018-19ರಲ್ಲಿ ಶೇ. 8. 65 ರಷ್ಟು ಬಡ್ಡಿದರವನ್ನು ಸುಮಾರು ಆರು ಕೋಟಿ ಗ್ರಾಹಕರಿಗೆ ಇಪಿಎಫ್ ಒ ಪಾವತಿಸಿತ್ತು.

2019-20ರ ಆರ್ಥಿಕ ವರ್ಷಕ್ಕೆ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.8.5 ಕ್ಕೆ ಇಳಿಸಿದ ಇಪಿಎಫ್ಒ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಏಳು ವರ್ಷಗಳಲ್ಲಿ ಕಡಿಮೆ ಎನ್ನಲಾದ ಶೇ. 8.5 ರಷ್ಟು ಪಾವತಿಸಲು ಇಪಿಎಫ್ಒ ನಿರ್ಧರಿಸಿದೆ. 2018-19ರಲ್ಲಿ ಶೇ. 8.65 ರಷ್ಟು ಬಡ್ಡಿದರವನ್ನು ಸುಮಾರು ಆರು ಕೋಟಿ ಗ್ರಾಹಕರಿಗೆ ಇಪಿಎಫ್ಒ  ಪಾವತಿಸಿತ್ತು. 

ಇಪಿಎಫ್ಒ - ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. 2019-20 ಆರ್ಥಿಕ ವರ್ಷದಲ್ಲಿ ಭವಿಷ್ಯ ನಿಧಿ ಪಾವತಿದಾರರಿಗೆ ಶೇ. 8.5 ರಷ್ಟು ಬಡ್ಡಿದರವನ್ನು ನೀಡಲು ಸಿಬಿಟಿ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸಭೆಯ ಬಳಿಕ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದರು.

ಈ ವರ್ಷದಲ್ಲಿ ಭವಿಷ್ಯನಿಧಿ ಗ್ರಾಹಕರಿಗೆ ಶೇ. 8.5 ರಷ್ಟು ಬಡ್ಡಿದರವನ್ನು ನೀಡಲು 700 ಕೋಟಿಯನ್ನು ಇಪಿಎಫ್ಒ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.

ಈ ವರ್ಷ ಶೇ. 8.55 ರಷ್ಟು ಬಡ್ಡಿದರವನ್ನು ಒದಗಿಸಿದರೆ ಸುಮಾರು 300 ಕೋಟಿಯನ್ನು ಹೆಚ್ಚುವರಿಯಾಗಿ ಇಪಿಎಫ್ ಒ ನೀಡಬೇಕಾಗುತ್ತದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಪ್ರಮಾಣದಲ್ಲಿ ಬಡ್ಡಿದರ ನೀಡಿದರೆ ಇಪಿಎಫ್ ಒ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಏಳು ವರ್ಷಗಳ ಹಿಂದೆ ಅಂದರೆ 2012-13 ರ ಆರ್ಥಿಕ ವರ್ಷದಲ್ಲಿ ಶೇ. 8.5 ರಷ್ಟು ಬಡ್ಡಿದರವನ್ನು ಕಡಿಮೆಗೊಳಿಸಲಾಗಿತ್ತು. 2016-17ರಲ್ಲಿ ಶೇ. 8.65 ರಷ್ಟು ಹಾಗೂ 2017-18ರಲ್ಲಿ ಶೇ. 8.55 ರಷ್ಟು ಬಡ್ಡಿದರವನ್ನು ಇಪಿಎಫ್ಒ ಪಾವತಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.