ವೆಬ್‌ಸೈಟ್‌ಗಳಲ್ಲಿ ಫೋಟೋ ಎಂಬೆಡ್ ಮಾಡಲು ಬಳಕೆದಾರರ ಅನುಮತಿ ಅಗತ್ಯ: ಇನ್ಸ್ಟಾಗ್ರಾಮ್
ಇತರ ವೆಬ್ ಸೈಟ್ ಗಳಲ್ಲಿ ಫೋಟೋಗಳನ್ನು ಎಂಬೆಡ್ ಮಾಡಲು ಬಳಕೆದಾರರ ಅನುಮತಿ ಅಗತ್ಯವಾಗಿರುತ್ತದೆ ಎಂದು ಇನ್ಸ್ಟಾಗ್ರಾಮ್ ಹೇಳಿದೆ.

ಸ್ಯಾನ್ ಫ್ರಾನ್ಸಿಸ್ಕೋ: ಇತರ ವೆಬ್ ಸೈಟ್ ಗಳಲ್ಲಿ ಫೋಟೋಗಳನ್ನು ಎಂಬೆಡ್ ಮಾಡಲು ಬಳಕೆದಾರರ ಅನುಮತಿ ಅಗತ್ಯವಾಗಿರುತ್ತದೆ ಎಂದು ಇನ್ಸ್ಟಾಗ್ರಾಮ್ ಹೇಳಿದೆ.
ಇದರರ್ಥ ಇನ್ಸ್ಟಾಗ್ರಾಮ್ ಬಳಕೆದಾರರು ಇನ್ನೊಬ್ಬರ ಇನ್ಸಾಟಾಗ್ರಾಮ್ ಪೋಸ್ಟ್ ನ್ನು ಇತರ ವೆಬ್ ಸೈಟ್ ನಲ್ಲಿ ಎಂಬೆಡ್ ಮಾಡಲು ಬಯಸಿದರೆ, ಅವನು ಅಥವಾ ಅವಳು ವ್ಯಕ್ತಿಯ ಕಾಫಿ ರೈಟ್ ಲೈಸೆನ್ಸ್ ಗಾಗಿ ಅನುಮತಿ ಪಡೆಯಬೇಕು, ಇಲ್ಲದಿದ್ದರೆ ಅವರು ಕಾಫಿರೈಟ್ ಮೊಕದ್ದಮೆ ಹೂಡಬಹುದಾಗಿದೆ.
ಆರ್ಸ್ ಟೆಕ್ನಿಕಾ ವರದಿ ಪ್ರಕಾರ, ಫೇಸ್‌ಬುಕ್ ಒಡೆತನದ ಇನ್ಸ್ಟಾಗ್ರಾಮ್ ಇತರ ವೆಬ್‌ಸೈಟ್‌ಗಳಲ್ಲಿ ಎಂಬೆಡ್ ಮಾಡಲಾಗಿರುವ ಚಿತ್ರಗಳ ಪ್ರದರ್ಶನಕ್ಕೆ ಕಾಫಿರೈಟ್ ಅನುಮತಿಯನ್ನು ಬಳಕೆದಾರರಿಗೆ ನೀಡಿಲ್ಲ.
ಇಲ್ಲಿಯವರೆಗೆ, ಫೋಟೋಗಳನ್ನು ನೇರವಾಗಿ ಹಾಕುವ ಬದಲು ಎಂಬೆಡ್ ಮಾಡುವುದು ಹಕ್ಕುಸ್ವಾಮ್ಯ ಹಕ್ಕಿಗೆ ವಿರೋಧ ಎಂಬುದನ್ನು ಬಳಕೆದಾರರು ನಂಬಿದ್ದರು. ನಮ್ಮ ನಿಯಮಗಳು ಉಪ ಪರವಾನಗಿ (ಸಬ್ ಲೈಸೆನ್ಸ್ ) ನೀಡಲು ಅವಕಾಶ ಮಾಡಿಕೊಟ್ಟರೂ, ಇತರ ವೆಬ್ ಸೈಟ್ ಗಳಲ್ಲಿ ಎಂಬೆಡ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಫೇಸ್ ಬುಕ್ ಕಂಪನಿ ವಕ್ತಾರರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


