ಸಗಟು ಬೆಲೆ ಸೂಚ್ಯಂಕ ಹಣದುಬ್ಬರ 1.81% ರಷ್ಟು ಕುಸಿತ! ಆದರೆ ಆಹಾರ ಪದಾರ್ಥಗಳ ಬೆಲೆ ಏರಿಕೆ!
ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ.1.81 ರಷ್ಟು ಕುಸಿತ ಕಂಡಿದೆ.

ನವದೆಹಲಿ: ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ.1.81 ರಷ್ಟು ಕುಸಿತ ಕಂಡಿದೆ.
ಆದರೆ ಆಹಾರ ಪದಾರ್ಥಗಳ ಬೆಲೆ ಮಾತ್ರ ಏರಿಕೆ ಕಂಡಿದೆ. ಮೇ ತಿಂಗಳಲ್ಲಿ ಶೇ.1.31 ರಷ್ಟಿದ್ದ ಆಹಾರ ಪದಾರ್ಥಗಳ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ.2.04 ರಷ್ಟಾಗಿದೆ.
ಇಂಧನ ಮತ್ತು ವಿದ್ಯುತ್ ಬೆಲೆಗಳಲ್ಲಿ ಇಳಿಕೆಯಾಗಿರುವ ಪರಿಣಾಮ ಜೂನ್ ತಿಂಗಳ ಸಗಟು ಬೆಲೆ ಸೂಚ್ಯಂಕ ಶೇ.1.81ರಷ್ಟಾಗಿದೆ.ಮೇ ತಿಂಗಳಲ್ಲಿ ಹಣದುಬ್ಬರವಿಳಿತದ ದರ ಶೇ.3.21 ರಷ್ಟಿತ್ತು.
ಇಂಧನ ಹಾಗೂ ವಿದ್ಯುತ್ ವಿಭಾಗದ ಹಣದುಬ್ಬರವಿಳಿಕೆ ಜೂನ್ ತಿಂಗಳಲ್ಲಿ ಶೇ.13.60 ರಷ್ಟಿತ್ತು. ಮೇ ತಿಂಗಳಲ್ಲಿ 19.83 ರಷ್ಟಿತ್ತು. ಜೂನ್ ತಿಂಗಳಲ್ಲಿ ತಯಾರಿಸಿದ ಉತ್ಪನ್ನಗಳ ಹಣದುಬ್ಬರ ಶೇ.0.08 ರಷ್ಟಿತ್ತು. ಹಣದುಬ್ಬರವಿಳಿಕೆಯ ಪ್ರಮಾಣ ಶೇ.042 ರಷ್ಟಿತ್ತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


