ವಾಲ್ ಮಾರ್ಟ್ ನಿಂದ ಹೂಡಿಕೆ ಅವಕಾಶ; 24.9 ಬಿಲಿಯನ್ ಡಾಲರ್ ಮೌಲ್ಯ ಹೆಚ್ಚಿಸಿಕೊಂಡ ಫ್ಲಿಪ್‌ಕಾರ್ಟ್ ಸಂಸ್ಥೆ
ಕೊರೋನಾ ವೈರಸ್ ಬಿಕ್ಕಟ್ಟಿನ ನಡುವೆಯೇ ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

ನವದೆಹಲಿ: ಕೊರೋನಾ ವೈರಸ್ ಬಿಕ್ಕಟ್ಟಿನ ನಡುವೆಯೇ ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.
ಹೌದು...ಫ್ಲಿಪ್‌ಕಾರ್ಟ್ ಗ್ರೂಪ್ ತನ್ನ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಹೆಚ್ಚುವರಿ 1.2 ಬಿಲಿಯನ್ ಇಕ್ವಿಟಿ ಸ್ವತ್ತನ್ನು ಹೆಚ್ಚಿಸಿಕೊಂಡಿದೆ. ಫ್ಲಿಪ್ಕಾರ್ಟ್ನ ಬಹುಪಾಲು ಪಾಲುದಾರಿಕೆ ಹೊಂದಿರುವ ವಾಲ್‌ಮಾರ್ಟ್ ನೇತೃತ್ವದಲ್ಲಿ ಕಂಪನಿಯ ಇತರೆ ಷೇರುದಾರರು ಈ ಹೂಡಿಕೆ ಮಾಡಿದ್ದಾರೆ. ಇದರೊಂದಿಗೆ ಕಂಪನಿಯ ಮೌಲ್ಯ 24.9 ಬಿಲಿಯನ್ ಡಾಲರ್ ಆಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಹಣವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು ಎಂದು ಹೇಳಲಾಗಿದೆ.
ಈ ಬಗ್ಗೆ ಮಾತನಾಡಿರುವ ಫ್ಲಿಪ್ಕಾರ್ಟ್ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ, 'ಕೊರೋನಾ ವೈರಸ್ ನಂತಹ ಸಾಂಕ್ರಾಮಿಕ ಸವಾಲಿನ ಸಮಯದಲ್ಲಿ ನಾವು ನಮ್ಮ ಸಂಸ್ಥೆಯನ್ನು ಸದೃಢವಾಗಿ ಬೆಳೆಸುವುದಕ್ಕೆ ಮತ್ತು ಭಾರತೀಯರ ಅವಶ್ಯಕತೆಗಳನ್ನು ಪೂರೈಸುವಿಕೆ ಹೆಚ್ಚುತ್ತಿರುವುದರಿಂದ ನಮ್ಮ ಷೇರುದಾರರು ಬೆಂಬಲವಾಗಿ ನಿಂತಿದ್ದಕ್ಕೆ ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ.
ಅಂತೆಯೇ ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್ ಹೂಡಿಕೆ ಆರಂಭ ಆದಾಗಿನಿಂದಲೂ ನಮ್ಮ ತಂತ್ರಜ್ಞಾನ, ಪಾಲುದಾರಿಕೆ ಮತ್ತು ಹೊಸ ಸೇವೆಗಳ ಮೂಲಕ ನಾವು ನಮ್ಮ ಕೊಡುಗೆಯನ್ನು ಹೆಚ್ಚು ವಿಸ್ತರಿಸಿಕೊಂಡಿದ್ದೇವೆ. ಇಂದು, ನಾವು ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಷನ್‌ನಲ್ಲಿ ಹೆಚ್ಚು ಮುನ್ನಡೆಯುತ್ತಿದ್ದೇವೆ. ಮತ್ತು ನಮ್ಮ ಗ್ರಾಹಕರಿಗೆ ತಡೆರಹಿತ ಪಾವತಿ ಮತ್ತು ವಿತರಣೆ ಇತರೆ ಸಾಮಾನ್ಯ ಸರಕು ವಿಭಾಗಗಳು ಮತ್ತು ದಿನಸಿಗಳಲ್ಲಿ ಪಾಲನ್ನು ಹೆಚ್ಚಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ 200 ಮಿಲಿಯನ್ ಭಾರತೀಯ ವ್ಯಾಪಾರಿಗಳನ್ನು ಆನ್‌ಲೈನ್ ವ್ಯವಸ್ಥೆಯಡಿ ತರುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
2007 ರಲ್ಲಿ ಸ್ಥಾಪನೆಯಾದ ಫ್ಲಿಪ್‌ಕಾರ್ಟ್ ಸಮೂಹವು, ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ಗಳಾದ ಫೋನ್ ಪೇ, ಫ್ಯಾಶನ್ ಸ್ಪೆಷಾಲಿಟಿ, ಮತ್ತು ಇ-ಕಾರ್ಟ್ ಅನ್ನು ಒಳಗೊಂಡಿದೆ. ಮತ್ತು ದ್ವಿತೀಯ ಮತ್ತು ತೃತೀಯ ದರ್ಜೆಯ ಭಾರತದ ನಗರಗಳ ಕೊನೆಯ ಮೈಲಿಯವರೆಗೆ ಸರಕು ಸೇವೆಯನ್ನು ಒದಗಿಸುವ ಲಾಜಿಸ್ಟಿಕ್ಸ್ ಮತ್ತು ವಿತರಣಾ ಸಂಸ್ಥೆಯಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್ 16 ಬಿಲಿಯನ್ ಹೂಡಿಕೆ ಮಾಡುವ ಮೂಲಕ ಕಂಪನಿಯ ಬಹುಪಾಲು ಷೇರಗಳನ್ನು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


