ತೆರಿಗೆ ಲೆಕ್ಕಾಚಾರದ ಗೊಂದಲ ತಪ್ಪಿಸಲು ಇ-ಕ್ಯಾಲ್ಕುಲೇಟರ್ ಪ್ರಾರಂಭಿಸಿದ ಐಟಿ ಇಲಾಖೆ
ಕೇಂದ್ರ ಬಜೆಟ್ ನಲ್ಲಿ ಘೋಷಿಸಿರುವಂತೆ ಐಟಿಆರ್ ಫೈಲಿಂಗ್‌ಗಾಗಿ ಹೊಸ ತೆರಿಗೆ ಸ್ಲ್ಯಾಬ್, ತೆರಿಗೆ ಕಡಿತ ಹಾಗೂ ವಿನಾಯಿತಿಗಳನ್ನು ಅಂದಾಜಿಸಲು ಆದಾಯ ತೆರಿಗೆ ಇಲಾಖೆ ಇ-ಕ್ಯಾಲ್ಕುಲೇಟರ್ ಅನ್ನು ಪ್ರಾರಂಭಿಸಿದೆ.

ನವದೆಹಲಿ: ಕೇಂದ್ರ ಬಜೆಟ್ ನಲ್ಲಿ ಘೋಷಿಸಿರುವಂತೆ ಐಟಿಆರ್ ಫೈಲಿಂಗ್‌ಗಾಗಿ ಹೊಸ ತೆರಿಗೆ ಸ್ಲ್ಯಾಬ್, ತೆರಿಗೆ ಕಡಿತ ಹಾಗೂ ವಿನಾಯಿತಿಗಳನ್ನು ಅಂದಾಜಿಸಲು ಆದಾಯ ತೆರಿಗೆ ಇಲಾಖೆ ಇ-ಕ್ಯಾಲ್ಕುಲೇಟರ್ ಅನ್ನು ಪ್ರಾರಂಭಿಸಿದೆ.
ಹಳೆಯ ಮತ್ತು ಹೊಸ ತೆರಿಗೆಗಳನ್ನು ಹೋಲಿಸಲು ತುಲನಾತ್ಮಕ ಕೋಷ್ಟಕವನ್ನು ಹೊಂದಿರುವ ಕ್ಯಾಲ್ಕುಲೇಟರ್,ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿಲಭ್ಯವಿದೆ ಎಂದು ಅಧಿಕಾರಿಗಳುಹೇಳಿದ್ದಾರೆ.
ವೆಬ್ ಪೋರ್ಟಲ್ ಅನ್ನು ಹಲವು ವರ್ಗದ ತೆರಿಗೆದಾರರುಎಲೆಕ್ಟ್ರಾನಿಕ್ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಗಳನ್ನು ಸಲ್ಲಿಸಲು ಬಳಸಲಾಗುತ್ತದೆ.ಸಾಮಾನ್ಯ ನಾಗರಿಕರ (60 ವರ್ಷಕ್ಕಿಂತ ಕಡಿಮೆ), ಹಿರಿಯ ನಾಗರಿಕ (60-79 ವರ್ಷ) ಮತ್ತು ಇನ್ನೂ ಹಿರಿಯ ನಾಗರಿಕ (79 ವರ್ಷಕ್ಕಿಂತ ಮೇಲ್ಪಟ್ಟ) ಮೂರು ವರ್ಗಗಳ ತೆರಿಗೆದಾರರು ಎಲ್ಲಾ ಮೂಲಗಳಿಂದ ತಮ್ಮ ಅಂದಾಜು ವಾರ್ಷಿಕ ಆದಾಯವನ್ನು ಇಲ್ಲಿ ಲೆಕ್ಕ ಹಾಕಬಹುದಾಗಿದೆ., ಒಟ್ಟು ಅರ್ಹ ಕಡಿತ ಹಾಗೂ ವಿನಾಯಿತಿಗಳು ಏನೆಲ್ಲಾ ಲಭ್ಯವಿದೆ ಎಂದು ನೋಡಲು ಅವರು ಹಳೆಯ ಮಾದರಿಯಲ್ಲಿ ಎಷ್ಟು ತೆರಿಗೆ ಅಥವಾ ಹೊಸ ಮಾದರಿಯನ್ನು ಅನುಸರಿಸಿದರೆ ಎಷ್ಟು ತೆರಿಗೆ ಬೀಳಲಿದೆ ಎನ್ನುವ ಲೆಕ್ಕಾಚಾರ ಇದರಲ್ಲಿ ಲಭ್ಯವಿದೆ.
ಕ್ಯಾಲ್ಕುಲೇಟರ್ 2020 ರ ಬಜೆಟ್ಮೆಮೋರಾಂಡಮ್ ನಿಂದ ಹೊರತೆಗೆದ ಹೊಸ ಆಡಳಿತದಡಿಯಲ್ಲಿ ಪ್ರಸ್ತಾಪಿಸಿದಂತೆ ಅರ್ಹ ವಿನಾಯಿತಿಗಳು ಮತ್ತು ಕಡಿತಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.ಹೊಸ ವೈಯಕ್ತಿಕ ಆದಾಯ ತೆರಿಗೆಯಲ್ಲಿಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದಂತೆ, ವಾರ್ಷಿಕ ಆದಾಯಕ್ಕೆ 2.5 ಲಕ್ಷದಿಂದ 5 ಲಕ್ಷ ದವರೆವಿಗೆ ಶೇ. 5ರ ತೆರಿಗೆ ಅನ್ವಯಿಸಲಿದೆ. ಅಲ್ಲದೆ ಅದಕ್ಕೆ ಮುಂದೆ ಪ್ರತಿ 2.5 ಲಕ್ಷ ರು. ಆದಾಯ ಹೆಚ್ಚಳಕ್ಕೆ ತೆರೆಗೆ ದರವು ಶೇ 10, 15 ಹಾಗೂ 20, 25ರಷ್ಟು ಹೆಚ್ಚಳವಾಗುತ್ತದೆ. 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯಕ್ಕಾಗಿ ಶೇ 30 ರಷ್ಟು ತೆರಿಗೆ ವಿಧಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


