ವಾಣಿಜ್ಯ

ಆಧಾರ್ ಕಾರ್ಡ್ ನ ಪ್ರಮುಖ ವಿವರಗಳನ್ನು ಇನ್ಮುಂದೆ ಆನ್ ಲೈನ್ ನಲ್ಲಿಯೇ ಅಪ್ಡೇಟ್ ಮಾಡಿಕೊಳ್ಳಬಹುದು!

ಆಧಾರ್ ಕಾರ್ಡ್ ಜನರ ಉಪಯೋಗಗಳಿಗೆ ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ. ಹಲವು ಬಾರಿ ಇದನ್ನು ಅಪ್ಡೇಟ್ ಮಾಡಿಸುವಾಗ ವಾರಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ ಈ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ!

ಆಧಾರ್ ಕಾರ್ಡ್ ನ ಪ್ರಮುಖ ವಿವರಗಳನ್ನು ಇನ್ಮುಂದೆ ಆನ್ ಲೈನ್ ನಲ್ಲಿಯೇ ಅಪ್ಡೇಟ್ ಮಾಡಿಕೊಳ್ಳಬಹುದು!
ಆಧಾರ್
Published On :

ಆಧಾರ್ ಕಾರ್ಡ್ ಜನರ ಉಪಯೋಗಗಳಿಗೆ ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ. ಹಲವು ಬಾರಿ ಇದನ್ನು ಅಪ್ಡೇಟ್ ಮಾಡಿಸುವಾಗ ವಾರಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ ಈ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ! 

ಕೋವಿಡ್-19 ಪ್ಯಾಂಡಮಿಕ್ ಹಿನ್ನೆಲೆಯಲ್ಲಿ ಯುಐಡಿಎಐ ಪ್ರಮುಖವಾದ ಬದಲಾವಣೆಯನ್ನು ಘೋಷಿಸಿದ್ದು, ಆಧಾರ್ ವಿವರಣೆಗಳಲ್ಲಿ ಆನ್ ಲೈನ್ ಮೂಲಕವೇ ಬದಲಾವಣೆ ಮಾಡಬಹುದಾದ ಆಯ್ಕೆಯನ್ನು ಜನಸಾಮಾನ್ಯರಿಗೆ ನೀಡಿದೆ. ಈ ಸೌಲಭ್ಯವನ್ನು ಬಳಸಿಕೊಂಡು ಜನತೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡದೆಯೇ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. 

ಆದರೆ ಕೆಲವೊಂದು ಬದಲಾವಣೆಗಳಿಗಾಗಿ ಈಗಲೂ ಆಧಾರ್ ಕೇಂದ್ರಕ್ಕೇ ತೆರಳಬೇಕಾಗಿದೆ. 

ಯಾವುದನ್ನು ಆನ್ ಲೈನ್ ಮೂಲಕ ಅಪ್ಡೇಟ್ ಮಾಡಬಹುದು

ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಹಾಗೂ ಭಾಷೆಯನ್ನು ಬದಲಾವಣೆ ಮಾಡಬಹುದಾಗಿದೆ.

ಯಾವುದನ್ನು ಆಧಾರ್ ಕೇಂದ್ರಕ್ಕೇ ಹೋಗಿ ಅಪ್ಡೇಟ್ ಮಾಡಬೇಕು?

ಕುಟುಂಬದ ಮುಖ್ಯಸ್ಥರು/ ಗಾರ್ಡಿಯನ್ ವಿವರ, ಬಯೋಮೆಟ್ರಿಕ್ ಅಪ್ಡೇಟ್ ಗಳನ್ನು ಕೇಂದ್ರಕ್ಕೇ ಹೋಗಿ ಬದಲಾವಣೆ ಮಾಡಬೇಕಾಗುತ್ತದೆ. 

ನೋಂದಣಿ ಮಾಡಿಕೊಂಡಿರುವ ಮೊಬೈಲ್ ಐಡಿ ಕಡ್ಡಾಯ

ಆನ್ ಲೈನ್ ಆಧಾರ್ ಅಪ್ಡೇಟ್ ಗೆ ನೋಂದಣಿ ಮಾಡಿಕೊಂಡಿರುವ ಮೊಬೈಲ್ ನಂಬರ್ ಕಡ್ಡಾಯವಾಗಿದ್ದು, ಬದಲಾವಣೆಗೂ ಮುನ್ನ ಮೊಬೈಲ್ ಗೆ ಒಟಿಪಿ ಬರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.