ವಾಣಿಜ್ಯ

ಜಿಎಸ್‍ಟಿ ಕೊರತೆ ನೀಗಿಸಲು ಮತ್ತೆ 6 ಸಾವಿರ ಕೋಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಸರಕು ಮತ್ತು ಸೇವಾ ತೆರಿಗೆ ಪರಿಹಾರದ ಕೊರತೆ ನಿವಾರಿಸಲು ಕೇಂದ್ರ ಸರ್ಕಾರ ಸೊಮವಾರ 6 ಸಾವಿರ ಕೋಟಿ ರೂ. ಬಿಡುಗಡೆಗೊಳಿಸಿದೆ.

ಜಿಎಸ್‍ಟಿ ಕೊರತೆ ನೀಗಿಸಲು ಮತ್ತೆ 6 ಸಾವಿರ ಕೋಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ನಿರ್ಮಲಾ ಸೀತಾರಾಮನ್
Published On :

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಪರಿಹಾರದ ಕೊರತೆ ನಿವಾರಿಸಲು ಕೇಂದ್ರ ಸರ್ಕಾರ ಸೊಮವಾರ 6 ಸಾವಿರ ಕೋಟಿ ರೂ. ಬಿಡುಗಡೆಗೊಳಿಸಿದೆ.

ಇದು1.10 ಲಕ್ಷ ಕೋಟಿ ರೂ. ಹಣದ ಕೊರತೆ ನಿವಾರಿಸಲು ಹಣಕಾಸು ಸಚಿವಾಲಯ ವಿಶೇಷ ಸಾಲ ಗವಾಕ್ಷಿಯಡಿ ರಾಜ್ಯಗಳಿಗೆ ನೀಡುತ್ತಿರುವ ಎಂಟನೇ ವಾರದ ಕಂತಾಗಿದೆ.

6,000 ಕೋಟಿ ರೂ.ಗಳಲ್ಲಿ 5,516.60 ಕೋಟಿ ರೂ.ಗಳನ್ನು 23 ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಮತ್ತು ಜಿಎಸ್ಟಿ ಕೌನ್ಸಿಲ್ ಸದಸ್ಯರಾಗಿರುವ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿ ಎಂಬ ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ 483.40 ಕೋಟಿ ರೂ. ವಿತರಿಸಲಾಗಿದೆ.

ಉಳಿದ ಐದು ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂಗಳ ಜಿಎಸ್ಟಿ  ಅನುಷ್ಠಾನದಲ್ಲಿ ಆದಾಯದ ಅಂತರವಿಲ್ಲ.

ಅಕ್ಟೋಬರ್ 2020ರಲ್ಲಿ ವಿಶೇಷ ಸಾಲ ಪಡೆಯುವ ಗವಾಕ್ಷಿ ಸ್ಥಾಪಿಸಲಾಗಿತ್ತು.  ರಾಜ್ಯಗಳಿಗೆ ಈ ಸಾಲಗಳನ್ನು  ನೀಡಲಾಗುತ್ತದೆ ಮತ್ತು ಈ ವಾರ ಎರವಲು ಪಡೆದ ಮೊತ್ತವು ಶೇ. 4.1902 ರಷ್ಟು ಬಡ್ಡಿದರದಲ್ಲಿರುತ್ತದೆ. ಇಲ್ಲಿಯವರೆಗೆ ಕೇಂದ್ರವು ಸರಾಸರಿ ಶೇ.4.6986 ಬಡ್ಡಿದರದಲ್ಲಿ ಮೂಲಕ 48,000 ಕೋಟಿ ರೂ. ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.