ಉದ್ಯೋಗಿಗಳಿಗೆ ಶುಭಸುದ್ದಿ! ಇಪಿಎಫ್ ಮೇಲಿನ ಶೇ.8.65 ಬಡ್ಡಿದರ ನಿಗದಿಗೆ ಸರ್ಕಾರ ಗ್ರೀನ್ ಸಿಗ್ನಲ್
ಕಾರ್ಮಿಕ ಸಚಿವಾಲಯವು 2018-19ನೇ ಸಾಲಿನ ನೌಕರರ ಭವಿಷ್ಯ ನಿಧಿಯ ಮೇಲೆ ಶೇ .8.65 ರಷ್ಟು ಬಡ್ಡಿದರ ನೀಡುವ ಶಿಫಾರಸು ಮಾಡಿದ್ದು ಇದೀಗ ದೇಶದ ಆರು ಕೋಟಿಗೆ ಹೆಚ್ಚು ಇಪಿಎಫ್‌ಒ ಖಾತೆದಾರರ ಖಾತೆಗೆ ಹೆಚ್ಚುವರಿ ಬಡ್ಡಿ ಜಮವಾಗಲಿದೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಮಂಗಳವಾರ ತಿಳಿಸಿದ್ದಾರೆ.

ನವದೆಹಲಿ: ಕಾರ್ಮಿಕ ಸಚಿವಾಲಯವು 2018-19ನೇ ಸಾಲಿನ ನೌಕರರ ಭವಿಷ್ಯ ನಿಧಿಯ ಮೇಲೆ ಶೇ .8.65 ರಷ್ಟು ಬಡ್ಡಿದರ ನೀಡುವ ಶಿಫಾರಸು ಮಾಡಿದ್ದು ಇದೀಗ ದೇಶದ ಆರು ಕೋಟಿಗೆ ಹೆಚ್ಚು ಇಪಿಎಫ್‌ಒ ಖಾತೆದಾರರ ಖಾತೆಗೆ ಹೆಚ್ಚುವರಿ ಬಡ್ಡಿ ಜಮವಾಗಲಿದೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಮಂಗಳವಾರ ತಿಳಿಸಿದ್ದಾರೆ.
ಈ ಹಿಂದೆ ಇದು ಶೇ .8.55 ಆಗಿದ್ದು ಇದೀಗ ಬಡ್ಡಿದರ ಪ್ರಮಾಣವನ್ನು ಶೇ.0.10ರಷ್ಟು ಹೆಚ್ಚಳ ಮಾಡಲಾಗಿದೆ.
"2018-19ರ ಆರ್ಥಿಕ ವರ್ಷದಲ್ಲಿ ಕಾರ್ಮಿಕ ಸಚಿವಾಲಯವು ನೌಕರರ ಭವಿಷ್ಯ ನಿಧಿಯ ಮೇಲಿಶೇ..8.65 ರಷ್ಟು ಬಡ್ಡಿದರ ನಿಗದಿಗೆ ಶಿಫಾರಸು ಮಾಡಿದೆ ಎಂಬುದು ನಮಗೆ ಅಪಾರ ಸಂತೋಷವನ್ನು ನೀಡುತ್ತದೆ. ಈ ಬಡ್ಡಿದರವು 2017-18ರಲ್ಲಿ ಒದಗಿಸಿದ ಶೇಕಡಾ 8.55 ಕ್ಕಿಂತ 10 ಬೇಸಿಸ್ ಪಾಯಿಂಟ್ ಹೆಚ್ಚಾಗಿದೆ" ಎಂದು ಗಂಗ್ವಾರ್ ಹೇಳಿದ್ದಾರೆ.
"ಈ ಪ್ರಸ್ತಾವನೆಯನ್ನು ಇಪಿಎಫ್‌ಒನ ಸಂಬಂಧ ಉನ್ನತ ಮಟ್ಟದ ನಿರ್ಧಾರ ತೆಗೆದುಕೊಳ್ಳುವ ಕೇಂದ್ರ ಟ್ರಸ್ಟಿಗಳು ಫೆಬ್ರವರಿ 22, 2019 ರಂದು ಅಂಗೀಕರಿಸಿದೆ. ನಾವು ಸೆಪ್ಟೆಂಬರ್ 19, 2019 ರಂದು ಹಣಕಾಸು ಸಚಿವಾಲಯದ ಸಮ್ಮತಿಯನ್ನು ಸ್ವೀಕರಿಸಿದ್ದೇವೆ. ನಂತರ, ಕಾರ್ಮಿಕ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ ಎಂದು ಅವರು ವಿವರಿಸಿದ್ದಾರೆ.
ಈ ನಿರ್ಧಾರವು 54 ಕೋಟಿ ರೂ ಮೊತ್ತವನ್ನು 6 ಕೋಟಿಗೂ ಹೆಚ್ಚು ಇಪಿಎಫ್‌ಒ ಚಂದಾದಾರರ ಖಾತೆಗೆ ಜಮಾ ಮಾಡಲು ದಾರಿ ಮಾಡಿಕೊಡುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


