ಮನಮೋಹನ್ ಸಿಂಗ್ ಅವಧಿಯಲ್ಲಿನ ಗರಿಷ್ಠ ಜಿಡಿಪಿ ಅಂಕಿ-ಅಂಶ ಸರ್ಕಾರಿ ವೆಬ್ ಸೈಟ್ ನಿಂದ ಡಿಲೀಟ್!?
ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ವಿವಾದವೊಂದು ಹುಟ್ಟಿಕೊಂಡಿದೆ.

ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ವಿವಾದವೊಂದು ಹುಟ್ಟಿಕೊಂಡಿದೆ.
ಯುಪಿಎ ಅವಧಿಯಲ್ಲಿ ದಾಖಲಾಗಿದ್ದ ಗರಿಷ್ಠ ಜಿಡಿಪಿ ಬೆಳವಣಿಗೆ ದರದ ವರದಿಯನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವೆಬ್ಸೈಟ್ ನಿಂದ ಡಿಲೀಟ್ ಮಾಡಲಾಗಿದೆ.
ಎನ್ ಡಿಎ ಸರ್ಕಾರ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ ನ್ನು 2004-05 ರಿಂದ 2010-11 ಕ್ಕೆ ಬದಲಾವಣೆ ಮಾಡಿದೆ. ಹಳೆಯ ವಿಧಾನದಲ್ಲಿ 2004-05 ನ್ನು ಯುಪಿಎ ಸರ್ಕಾರ ಮಾದನಂಡವನ್ನಾಗಿ ಬಳಕೆ ಮಾಡಿತ್ತು.
ಸಚಿವಾಲಯದ ವರದಿ ವೆಬ್ ಸೈಟ್ ನಲ್ಲಿ ಜು.25 ರಂದು ಪ್ರಕಟವಾಗಿತ್ತು, ಇದರಲ್ಲಿನ ಮಾಹಿತಿಯ ಪ್ರಕಾರ 2006-07 ನೇ ಸಾಲಿನಲ್ಲಿ (ಮನಮೋಹನ್ ಸಿಂಗ್ ಆಡಳಿತಾವಧಿ) ಭಾರತ ಶೇ.10.8 ರಷ್ಟು ಬೆಳವಣಿಗೆ ದಾಖಲಿಸಿತ್ತು.
2004-14 ರ ಯುಪಿಎ ಅವಧಿಯ ಆರ್ಥಿಕ ಬೆಳವಣಿಗೆ ಅತ್ಯುತ್ತಮವಾದ ಆರ್ಥಿಕ ಬೆಳವಣಿಗೆಯಾಗಿತ್ತು ಎಂಬುದನ್ನು ಕಳೆದ ವಾರ ಉಲ್ಲೇಖಿಸಿದ್ದ ಚಿದಂಬರಂ, ಸತ್ಯ ಜಯಗಳಿಸಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


