2020ರ ವೇಳೆಗೆ ಭಾರತದ ಜಿಡಿಪಿ ದರ ಶೇ.7ಕ್ಕೆ ಮರಳಲಿದೆ: ಐಎಂಎಫ್ ಆರ್ಥಿಕ ತಜ್ಞೆ
ಪ್ರಸ್ತುತ ಕುಸಿದಿರುವ ಭಾರತದ ಜಿಡಿಪಿ ದರ 2020ರ ವೇಳೆ ಮತ್ತೆ ಶೇ.7ಕ್ಕೆ ಮರಳಲಿದೆ ಎಂದು ವಿಶ್ವ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

ನವದೆಹಲಿ: ಪ್ರಸ್ತುತ ಕುಸಿದಿರುವ ಭಾರತದ ಜಿಡಿಪಿ ದರ 2020ರ ವೇಳೆ ಮತ್ತೆ ಶೇ.7ಕ್ಕೆ ಮರಳಲಿದೆ ಎಂದು ವಿಶ್ವ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಗೀತಾ ಅವರು, ಇತ್ತೀಚೆಗೆ ಐಎಂಎಫ್ ಭಾರತದ ಆರ್ಥಿಕತೆಯನ್ನು ಈ ವರ್ಷ ಶೇಕಡಾ 6.1 ಕ್ಕೆ ಇಳಿಸಿದ ನಂತರ ಈಗ ಅದು 2020 ರಲ್ಲಿ ಶೇಕಡಾ 7ಕ್ಕೆ ವೃದ್ದಿಯಾಗುವ ನಿರೀಕ್ಷೆಯಿದೆ. ಭಾರತ 2019 ರಲ್ಲಿ ಹಲವು ವಲಯಗಳಲ್ಲಿ ಕುಸಿತವನ್ನು ಕಂಡಿದೆ. ನಾವು ಈ ಬೆಳವಣಿಗೆಯನ್ನು ಚಕ್ರದ ಕುಸಿತ ಎಂದು ಭಾವಿಸಿದ್ದೇವೆ, ನಾವು ಭಾರತದ ಬೆಳವಣಿಗೆಯನ್ನು 2019 ರಲ್ಲಿ ಶೇ 6.1 ಕ್ಕೆ ಇಳಿಸಿದ್ದೇವೆ. ಆದಾಗ್ಯೂ, ನಾವು ಅದನ್ನು 2020 ರಲ್ಲಿ ಶೇಕಡಾ 7 ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ಮೂಲದ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರು 2019 ರ ಜನವರಿಯಲ್ಲಿ ಐಎಂಎಫ್ ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞೆಯಾಗಿ ನೇಮಕವಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


