ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ
ವಿಶ್ವದ ಖ್ಯಾತ ಕಾರು ತಯಾರಿಕಾ ಕಂಪನಿ ವೋಲ್ವೋ ಕಾರ್ ಇಂಡಿಯಾ ರಾಜ್ಯದ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ತನ್ನ ಅಧಿಕೃತ ಸೇವಾ ಸಂಸ್ಥೆ ಎಂದು ಮಾರ್ಷಲ್ ಮೋಟರ್ಸ್ ಗೆ ಮಾನ್ಯತೆ ನೀಡಿದೆ.

ಬೆಂಗಳೂರು: ವಿಶ್ವದ ಖ್ಯಾತ ಕಾರು ತಯಾರಿಕಾ ಕಂಪನಿ ವೋಲ್ವೋ ಕಾರ್ ಇಂಡಿಯಾ ರಾಜ್ಯದ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ತನ್ನ ಅಧಿಕೃತ ಸೇವಾ ಸಂಸ್ಥೆ ಎಂದು ಮಾರ್ಷಲ್ ಮೋಟರ್ಸ್ ಗೆ ಮಾನ್ಯತೆ ನೀಡಿದೆ.
ಈ ಸಂಸ್ಥೆ ವೋಲ್ವೋ ಪರ್ಸನಲ್ ಸರ್ವೀಸ್ (ವಿಪಿಎಸ್) ಡೀಲರ್ ಆಗಿದೆ. ವಿಶ್ವದ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ವೋಲ್ವೋ ಕಾರುಗಳಿಗೆ ಇಲ್ಲಿ ಸೇವೆ ಒದಗಿಸಲಿದೆ. ವಿಪಿಎಸ್ ಗ್ರಾಹಕರನ್ನು ರಕ್ಷಿಸುವ ಸಮಯದಲ್ಲಿ ಕನಿಷ್ಠ ಶೇ.50 ರಷ್ಟು ಉಳಿತಾಯ ಮಾಡಲಿದೆ. ಇಲ್ಲಿನ ತಂತ್ರಜ್ಞರು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಲಿದ್ದು, ಎರಡೂ ಬದಿಯಿಂದಲೂ ಸ್ಪಷ್ಟವಾದ ಮಾಹಿತಿಗಳು ವಿನಿಮಯವಾಗಿ ವಾಹನದ ಸರ್ವೀಸ್ ಸೇವೆಯ ಗುಣಮಟ್ಟ ಹೆಚ್ಚಾಗಲಿದೆ.ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಚಾರ್ಲ್ಸ್ ಫ್ರಂಪ್ ಸಮ್ಮುಖದಲ್ಲಿ ಮಾರ್ಷಲ್ ಮೋಟರ್ಸ್ ಗೆ ಈ ಅಧಿಕೃತ ಸೇವಾ ಕೇಂದ್ರದ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚಾರ್ಲ್ಸ್ ಫ್ರಂಪ್, 'ನಮ್ಮ ಶೋರೂಂನಲ್ಲಿ ಮಾರಾಟವಾದ ಕಾರುಗಳಿಗೆ ಸೂಕ್ತ ರೀತಿಯಲ್ಲಿ ಸರ್ವೀಸ್ ಸೌಲಭ್ಯ ಒದಗಿಸುತ್ತಿದ್ದೇವೆ. ನಮ್ಮ ವಿಪಿಎಸ್ ಸಂಪರ್ಕ ಜಾಲದ ಮೂಲಕ ಗ್ರಾಹಕರು ತಡೆರಹಿತವಾದ ಸೇವೆಗಳನ್ನು ಪಡೆಯಬಹುದಾಗಿದೆ. ನಮ್ಮ ಪಾಲುದಾರರಾಗಿರುವ ಮಾರ್ಷಲ್ ಮೋಟರ್ಸ್ ಇದೀಗ ಪ್ರಮಾಣೀಕೃತ ವಿಪಿಎಸ್ ಡೀಲರ್ ಎಂದು ಘೋಷಿಸಲು ನಮಗೆ ಸಂತಸವೆನಿಸುತ್ತದೆ' ಎಂದರು.
ಮಾರ್ಷಲ್ ಮೋಟರ್ಸ್ ನ ಡೀಲರ್ ಪ್ರಿನ್ಸಿಪಾಲ್ ರಿತೇಶ್ ರೆಡ್ಡಿ ಅವರು ಮಾತನಾಡಿ, `ವೋಲ್ವೋ ಕಾರು ಸಂಸ್ಥೆಯು ತನ್ನ ಗ್ರಾಹಕರಿಗೆ ಗುಣಮಟ್ಟದ ಸಮಯವನ್ನು ವಾಪಸ್ ನೀಡಲು ಬಯಸುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಬಹುದಾಗಿದೆ. ಈ ವಿಪಿಎಸ್ ಮಾದರಿಯ ಸೇವೆಯು ಗ್ರಾಹಕರಿಗೆ ತಮ್ಮ ಅತ್ಯಮೂಲ್ಯವಾದ ಸಮಯ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯ ಅನುಭವ ನೀಡುತ್ತಿರುವ ವೋಲ್ವೋ ಕಾರು ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಹೊಂದುತ್ತಿರುವುದಕ್ಕೆ ನಮಗೆ ಅತೀವ ಸಂತಸವೆನಿಸುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


