ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
ಭಾರತದಿಂದ ವಸ್ತುಪ್ರದರ್ಶನಕ್ಕಾಗಿ ಅಥವಾ ಇತರ ಉತ್ಪನ್ನ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಒಯ್ಯುವ ವಸ್ತುಗಳ ಮೇಲೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಇಂಟಿಗ್ರೇಟೆಡ್ ಜಿಎಸ್‌ಟಿ)

Published On :
ನವದೆಹಲಿ: ಭಾರತದಿಂದ ವಸ್ತುಪ್ರದರ್ಶನಕ್ಕಾಗಿ ಅಥವಾ ಇತರ ಉತ್ಪನ್ನ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಒಯ್ಯುವ ವಸ್ತುಗಳ ಮೇಲೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಇಂಟಿಗ್ರೇಟೆಡ್ ಜಿಎಸ್‌ಟಿ) ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
ವಸ್ತುಪ್ರದರ್ಶನ ಅಥವಾ ಉತ್ಪನ್ನ ಪ್ರೋತ್ಸಾಹಕ್ಕೆಂದು ಸರಕುಗಳನ್ನು ವಿದೇಶಗಳಿಗೆ ಕೊಂಡೊಯ್ಯುವುದರಿಂದ ಅದನ್ನು ಜಿಎಸ್‌ಟಿ ಅಡಿ ಮಾರಾಟ ಎಂದು ಪರಿಗಣಿಸಲಾಗುವುದು, ಆ ಹಂತದಲ್ಲಿ ಅದು ಮಾರಾಟಕ್ಕಿಟ್ಟ ವಸ್ತುವಾಗಿರುತ್ತದೆಯೇ ಹೊರತು ಅದರ ಖರೀದಿಯಾಗಿರುವುದಿಲ್ಲ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಅಬಕಾರಿ ಸುಂಕ ಮಂಡಳಿ (ಸಿಬಿಐಸಿ) ನೀಡಿರುವ ಹೇಳಿಕೆ ತಿಳಿಸಿದೆ.
ರತ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ಪ್ರದರ್ಶನಕ್ಕಾಗಿ ವಿದೇಶಗಳಿಗೆ ಕೊಂಡೊಯ್ದು ವಾಪಸ್ ಆಮದಾಗುವಾಗ ಐಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕೈಗಾರಿಕೆಗಳು ಮತ್ತು ವ್ಯಾಪಾರ ಸಂಘಟನೆಗಳು ಹಣಕಾಸು ಸಚಿವಾಲಯವನ್ನು ಕೋರಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


