2018-19ರಲ್ಲಿ ಭಾರತದ ಜಿಡಿಪಿ ಶೇ.7.2 ರಷ್ಟು ವೃದ್ಧಿ ಸಾಧ್ಯತೆ
2018-19ರ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ(ಜೆಡಿಪಿ) ಶೇ.7.2ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ...

Published On :
ನವದೆಹಲಿ: 2018-19ರ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ(ಜೆಡಿಪಿ) ಶೇ.7.2ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ಕೇಂದ್ರೀಯ ಅಂಕಿ ಅಂಶಗಳ ಸಂಘಟನೆ(ಸಿಎಸ್‌ಒ) ಸೋಮವಾರ ತಿಳಿಸಿದೆ.
2017-18ರಲ್ಲಿನ ಶೇ.6.7ರ ಪ್ರಗತಿಯನ್ನು ಈ ವರ್ಷ ಹಿಂದಿಕ್ಕಲಿದೆ. ಕೃಷಿ ಮತ್ತು ಉತ್ಪಾದನಾ ವಲಯದ ಸುಧಾರಣೆಯ ಪರಿಣಾಮ ಜಿಡಿಪಿ ದರ ಶೇ.7.2ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿದೆ.
ಆರ್ಥಿಕ ವರ್ಷ ಕೊನೆಯಾಗಲು ಸರಿಯಾಗಿ 83 ದಿನಗಳು ಬಾಕಿ ಇರುವಾಗ ತನ್ನ ವಾರ್ಷಿಕ ಅಂದಾಜು ವರದಿ ಬಿಡುಗಡೆ ಮಾಡಿರುವ ಸಿಎಸ್‌ಒ, ಜಿಡಿಪಿ ದರ 7.2%ಕ್ಕೆ ತಲುಪಬಹುದು ಎಂದು ಅಂದಾಜಿಸಿದೆ.
ಕೃಷಿ, ಅರಣ್ಯ ಮತ್ತು ಮೀನುಗಾರಿಕೆಯಲ್ಲಿ ಬೆಳವಣಿಗೆಯ ಮಟ್ಟ ಶೇ.3.4ರಿಂದ ಶೇ.3.8ಕ್ಕೆ ವೃದ್ಧಿಸಲಿದೆ ಎಂದು ವಿವರಿಸಿದೆ.
ಉತ್ಪಾದನಾ ವಲಯದ ಬೆಳವಣಿಗೆ ಕೂಡ ಶೇ.5.7ರಿಂದ ಶೇ.8.3ಕ್ಕೆ ವೃದ್ಧಿಸುವ ನಿರೀಕ್ಷೆ ಇದೆ. ಜಿಡಿಪಿ ಪ್ರಗತಿಯು 2015-16ರಲ್ಲಿ ಶೇ.8.2, 2016-17ರಲ್ಲಿ ಶೇ.7.1ರಷ್ಟು ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


